‘ಓದಿವನಿಂದು ಪ್ರೇರಣೆಗೆಂದು' ಎಂಬುದು ಮಕ್ಕಳಿಗಾಗಿ ಪ್ರೇರಕ ಪ್ರಸಂಗಗಳ ಪುಸ್ತಕ. ಲೇಖಕ ಗುರುರಾಜ ಬೆಣಕಲ್ ರಚಿಸಿದ್ದಾರೆ. “ಎಂದರೋ ಮಹಾನುಭಾವುಲು ಅಂದರಿಕೆ ನಾ ವಂದನಮುಲು” ಎಂಬ ತೆಲುಗು ಕವಿಯೊಬ್ಬ ಹಾಡಿರುವದನ್ನು ನೀವು ಕೇಳಿರಬಹುದು. ಹೇಗೆ ಹಾಡಿಸಿಕೊಳ್ಳಲು ಯೋಗ್ಯರಾದ ಮಹಾನುಭಾವರ ಜೀವನದಲ್ಲಿ ನಡೆದ ಪ್ರಸಂಗಗಳು, ಘಟನೆಗಳು, ಯಾವುವು ಎಂಬ ಕುತೂಹಲ ನಿಮ್ಮಲ್ಲಿ ಇರುವುದು ಸಹಜ. ಅವರ ಜೀವನವೇ ಪ್ರೇರಣಾದಾಯಕ ಆದಾಗ್ಯೂ ವಿಶ್ವದ ಸುಪ್ರಸಿದ್ದ ಚಿಂತಕರು, ವಿಚಾರಕರು ದಾರ್ಶನಿಕರು, ಕವಿ ಲೇಖಕರು, ರಾಜ ನೀತಿಜ್ಞ ಮತ್ತು ಸಂತರ ಜೀವನದಲ್ಲಿ ನಡೆದ ಕೆಲವು ಕುತೂಹಲಕಾರಿ ಹಾಗೂ ನಿಮ್ಮ ಜೀವನಕ್ಕೆ ಪ್ರೇರಣೆದಾಯಕ ಎನಿಸಬಹುದಾದ ಹಲವು ಪ್ರಸಂಗಗಳನ್ನು ಮಾತ್ರ ನಿಮಗೆ ಸ್ಫೂರ್ತಿದಾಯಕವಾಗಲೆಂದು ಇಲ್ಲಿ ಕೊಡುತ್ತಿದ್ದೇನೆ’ ಎಂದು ಲೇಖಕರು ಈ ಪುಸ್ತಕದ ಕುರಿತಾಗಿ ವಿವರಿಸಿದ್ದಾರೆ.
©2025 Book Brahma Private Limited.