ಕಲ್ಪನಾ ಸಾಗರ ಹಾಗು ವಿದ್ಯಾನಂದ ಕೇಸ್ತಿಯವರು ಬರೆದಿರುವ ಬದುಕು ಸಂತಸದ ಹೊನಲಾಗಿಸುವಂತಹ ಬರಹಗಳ ಕೃತಿ 'ಬತ್ತದಿರಲಿ ಸ್ಪೂರ್ತಿಯ ಸೆಲೆ'.
ಜೀವನ ಬಂಡಿ ನಾವು ಅಂದುಕೊಂಡಂತೆ ಸಾಗುವುದಿಲ್ಲ. ನಾನಾ ತೆರನಾದ ಏರು ಇಳಿವುಗಳಲಿ ಹತ್ತಿ ಇಳಿಯಬೇಕಾಗುವುದು. ಕಣಿವೆ ಕೊರಕಲುಗಳಲಿ ಜಾರಿ ಏರಬೇಕಾಗುವುದು. ಎದುರಿನವರ ಬಿರುನುಡಿಗೊ ಸಲ್ಲದ ಆಕ್ಷೇಪಕ್ಕೊ ಗಾಡಿ ನಿಲ್ಲಿಸಲಾಗದು. ಅಕ್ಕಪಕ್ಕದವರ ಅಕಾರಣವೊ ಸಕಾರಣವೊ ಮೂದಲಿಕೆಗಳಿಗೆ ನಿಂತು ಕಿವಿಕೊಡುತ್ತ ಗುರಿ ಮರೆಯಲಾಗದು. ಮಳೆ ಚಳಿ ಬಿಸಿಲೆನ್ನದೆ ಬಂಡಿ ಹೊಡೆಯುತಿರಲೇಬೇಕು. ಅಪಾರ ತಾಳ್ಮೆ, ಬುದ್ಧಿಬಲ, ಚಾಕಚಕ್ಯತೆಗಳ ಜೊತೆ ಸೌಜನ್ಯ, ಸಜ್ಜನಿಕೆಗಳು ಸುಮಧುರ ಬಂಧುತ್ವಗಳು, ಸ್ಪೂರ್ತಿಯುತ ಮಾತು, ಕೃತಿಗಳು ಬದುಕ ಬಂಡಿ ದಾರಿ ತಪ್ಪದೆ ಸಾಗುತಿರಲು ಸಹಾಯಕಗಳು ಹಾಗೂ ಪ್ರೇರಕಗಳು.
©2024 Book Brahma Private Limited.