ಅನೇಕ ಜನ, ಗೌರವ, ಸೃಜನಶೀಲ ಸಾಧನೆ, ಮೋಕ್ಷ ಹೀಗೆ ತಮ್ಮದೇ ಆದ ಗುರಿಗಳನ್ನು ಹಾಕಿಕೊಳ್ಳುತ್ತಾರೆ. ಆದರೆ ಸಾಧಿಸಲು ಆಯ್ದುಕೊಳ್ಳಬೇಕಾದ ದಾರಿ ಯಾವುದು. ಗುರಿಯ ಆಯ್ಕೆ ಹೇಗೆ ? ಎಂತಹ ಗುರಿ ನಮ್ಮದಾಗಿರಬೇಕು ? ಮಾರ್ಗ ಹೇಗಿರಬೇಕು ? ಸ್ಪರ್ಧೆಗಳು, ಒತ್ತಡಗಳು ಹಾಗೂ ಬಹುವಿಧ ಮಾಧ್ಯಮಗಳಿಂದ ಚಂಚಲಗೊಳ್ಳುತ್ತಿರುವ ನಮ್ಮ ಯುವಜನತೆಯ ಚಿತ್ತಗಳು ಗುರಿಯತ್ತ ಸಾಗುವ ಬಗೆ ಹೇಗೆ? ಎಂಬುದರ ಕುರಿತು ಮಹಾಬಲೇಶ್ವರ ರಾವ್ ಇಲ್ಲಿನ ಲೇಖನಗಳಲ್ಲಿ ತಿಳಿಸಿದ್ದಾರೆ. ಅವರ ವ್ಯಕ್ತಿತ್ವ ವಿಕಸನಕ್ಕೆ ಕುರಿತ ಲೇಖನಗಳನ್ನು ಸಂಪಾದಿಸಿದ್ದಾರೆ ಸಿ. ಆರ್. ಚಂದ್ರಶೇಖರ್.
(ಹೊಸತು, ಆಗಸ್ಟ್ 2014, ಪುಸ್ತಕದ ಪರಿಚಯ)
ಜೀವನಕ್ಕೊಂದು ಗುರಿಯಿರಬೇಕೆಂದೂ ಅದನ್ನು ಸಾಧಿಸಲು ನಿರಂತರ ಪ್ರಯತ್ನ ಬೇಕೆಂದೂ ಹೇಳಲಾಗುತ್ತದೆ. ಮನುಷ್ಯ ಅದರಲ್ಲಿ ಎಷ್ಟು ಯಶಸ್ವಿಯಾಗುತ್ತಾನೆ ? ಗುರಿ ಮುಟ್ಟಲಾಗದಿದ್ದರೆ ಅವಮಾನಕರವೆ ? ಅದು ಹೇಗೆ ಸಾಧ್ಯ ? ಮರಳಿ ಯತ್ನವನ್ನು ಮಾಡುವುದೆ ? ಮೊದಲು ಗುರಿಗಳನ್ನು ಇರಿಸಿಕೊಳ್ಳುವುದು ಮತ್ತು ಸಾಧಿಸುವುದು ಒಳ್ಳೆಯ ಆಯ್ಕೆಯಾಗಿರಲಿ. ಯಾರನ್ನೋ ತುಳಿದು ಮೇಲೆ ಬರುವುದಾಗಲೀ, ಸ್ವಾರ್ಥ ಸಾಧಿಸಿ ಇನ್ನೊಬ್ಬರ ತೇಜೋವಧೆ ಮಾಡುವುದಾಗಲೀ ಗುರಿಗಳಾಗಿರಬಾರದು. ಇಂದಿನ ಸನ್ನಿವೇಶದಲ್ಲಿ ಗುರಿಸಾಧನೆಗೆ ಬಹಳಷ್ಟು ಅಡೆತಡೆಗಳು ಬರುತ್ತವೆ. ಅಲ್ಲಿ ಸ್ಪರ್ಧೆ ಏರ್ಪಡುತ್ತದೆ. ವ್ಯಾಪಾರದ ಕ್ಷೇತ್ರದಲ್ಲಂತೂ ಗುರಿಮುಟ್ಟಲು ಪ್ರಾಮಾಣಿಕ ಪ್ರಯತ್ನ ಕೆಲಸಕ್ಕೇ ಬಾರದು ಎಂಬಂತೆ ಪರಿಸ್ಥಿತಿ ಹದಗೆಟ್ಟಿದೆ. ನಾವಿಂದು ನಮ್ಮ ಯಶಸ್ಸಿಗೆ ಹಿಡಿದಿರುವ ಮಾರ್ಗದಲ್ಲಿ ಸಾಗುವುದು ಹೇಗೆ ಮತ್ತು ಬುದ್ಧಿವಂತಿಕೆಯಿಂದ ಮುಂದುವರಿಯುವುದು ಕ್ಷೇಮವೆಂಬ ಅಂಶವನ್ನು ಲೇಖನಗಳ ಮೂಲಕ ನಿರೂಪಿಸಿದ್ದಾರೆ ಡಾ| ಮಹಾಬಲೇಶ್ವರ ರಾವ್, ಇವರು ಉತ್ತಮ ಶಿಕ್ಷಕರು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವಲ್ಲಿ ನಿಪುಣರು. ಹಲವು ಉದಾಹರಣೆಗಳ ಮೂಲಕ ಗುರಿಸಾಧನೆಗೆ ನೆರವಾಗುವ ಯೋಗ್ಯ ಸಲಹೆಗಳನ್ನು ನೀಡಿದ್ದಾರೆ.
©2024 Book Brahma Private Limited.