‘ನಾನು ಅಸಹಾಯಕ, ನಿಷ್ಪ್ರಯೋಜಕ ಮತ್ತು ಇನ್ನು ನನಗಾರು ಗತಿ’ ಎಂಬ ನಕಾರಾತ್ಮಕ ಭಾವನೆಗಳಿಗೆ ದಾಸರಾಗಿ ಆಧುನಿಕ ಯುಗದ ಹದಿಹರೆಯದ ಹುಡುಗ-ಹುಡುಗಿಯರಲ್ಲಿ ಹಲವರು ಸೋಲಿನಿಂದ ಕಂಗೆಟ್ಟವರು ಓದಬೇಕಾದ ಕೃತಿ.
ಪ್ರಯತ್ನಗಳನ್ನು ಕೈಚೆಲ್ಲಿ ಆತ್ಮಹತ್ಯೆಗೆ ಮನಮಾಡುವುದು ಅಥವಾ ಮನೆಬಿಟ್ಟು ಓಡಿಹೋಗುವುದು ಯೋಚಿಸಬೇಕಾದ ವಿಷಯ. ‘ಮನಸ್ಸಿದ್ದರೆ ಮಾರ್ಗವಿದೆ’, ‘ಸಾಧಿಸಿದರೆ ಸಬಳ ನುಂಗಬಹುದು’, ‘ಇಲ್ಲಿ ಯಾವುದೂ ಅಸಾಧ್ಯವಲ್ಲ’, ‘ನಾವು ಗೆದ್ದೇ ಗೆಲ್ಲುವೆವು’, ‘ಈಸಬೇಕು ಇದ್ದು ಜೈಸಬೇಕು’ ಮೊದಲಾದ ರೂಢಿಯ ಮಾತುಗಳು ಬದುಕನ್ನು ಬೆಳಗುವ ಸಾಲುಗಳು ಇಲ್ಲಿ ಬರುತ್ತವೆ ಹಾಗೂ ಜೀವನದಲ್ಲಿ ನೊಂದವರಿಗೆ, ಹತಾಶರಾದವರಿಗೆ ಇಲ್ಲಿನ ಉಕ್ತಿಗಳು ಸ್ಪೂರ್ತಿ ಚಿಲುಮೆಯಾಗುತ್ತವೆ.
ಮನೋವಿಜ್ಞಾನದ ಕ್ಷೇತ್ರದ ತೀರ ಈಚಿನ ಕುಡಿಯಾಗಿರುವ ‘ಪಾಸಿಟಿವ್’ ಮನೋವಿಜ್ಞಾನದ ಮೂಲ ಆಶಯಗಳನ್ನು ನಿಜ ಜೀವನದ ಸ್ವಾರಸ್ಯಕರ ದೃಷ್ಟಾಂತಗಳೊಂದಿಗೆ ಈ ಕೃತಿಯಲ್ಲಿ ಚರ್ಚಿಸಲಾಗಿದೆ. ಈ ಪುಸ್ತಕ ಎರಡು ಮುದ್ರಣ ಕಂಡಿದ್ದು 2013ರ ಕನ್ನಡ ಸಾಹಿತ್ಯ ಪರಿಷತ್ತಿನ ‘ಡಾ. ಎಸ್. ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿನಿಧಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
©2025 Book Brahma Private Limited.