‘ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು’ ಎಂಬ ಮಾತಿದೆ. ಅಂದರೆ ಮನುಷ್ಯ ಜೀವನದಲ್ಲಿ ಆತ ಅಡುವ ಪ್ರತಿ ಮತಿಗೂ ಅಷ್ಟೊಂದು ಮೌಲ್ಯ, ತೂಕ ಇದೆ ಎಂದರ್ಥ. ನಾವಾಡುವ ಮಾತು ನಮ್ಮದು ಎಂತಹ ವ್ಯಕ್ತಿತ್ವ ಎಂಬುದನ್ನು ಗುರುತಿಸುತ್ತದೆ. ಇಂತಹ ಅಂಶಗಳನ್ನು ಒಳಗೊಂಡು ‘ಮಾತು’ಗಳ ಸುತ್ತವೇ SSಪ್ರಕಟವಾದ ಗಿರಿಮನೆ ಶ್ಯಾಮರಾವ್‍ರ ವ್ಯಕ್ತಿತ್ವ ವಿಕಸನಕ್ಕೆ ಸಂಭಂದಿಸಿದ ಮತ್ತೊಂದು ಕೃತಿಯೇ ‘ಮಾತು ಹೇಗಿದ್ದರೆ ಚೆನ್ನ’. ಹೌದು, ಮನುಷ್ಯನ ಜೀವನದಲ್ಲಿ ಮಾತಿಗೆ ಅಷ್ಟು ಎತ್ತರವಾದ ಪ್ರಾಮುಖ್ಯತೆ ಇದೆ. ನಮ್ಮ ಸಮಾಜದಲ್ಲಿ ನಾವು ಆಡುವ ಪ್ರತಿ ಮಾತಿಗೂ ಸಾವಿರಾರು ಅರ್ಥ, ತರ್ಕ ಹುಡುಕುವ ಜನರಿರುತ್ತಾರೆ. ಹೀಗಾಗಿ ಸಂಧರ್ಬಕ್ಕೆ ಅನುಸಾರವಗಿ ಎಲ್ಲೆಲ್ಲಿ ಹೇಗೆ ಮಾತನಡಬೇಕು ಎಂಬುದನ್ನು ಲೇಖಕರು ಉಲ್ಲೇಖಿಸಿದ್ದಾರೆ. ನಾವಾಡುವ ಮಾತು ನಮಗೊಂದು ಗಾಂಭೀರ್ಯವನ್ನು ತೂಕದ ಶ್ರೇಷ್ಠ ವ್ಯಕ್ತಿತ್ವವನು ತಂದುಕೊಡಬೇಕು, ನಮ್ಮ ಮಾತು ಎಷ್ಟು ಅರ್ಥಪೂರ್ಣವಾಗಿರುತ್ತದೆ ಎಂಬುದರ ಮೇಲೆ ಜನ ,ಸಮಾಜ ನಮ್ಮನ್ನು ಗುರುತಿಸುತ್ತಾರೆ. ನಾವು ಸಂದರ್ಭ, ಸನ್ನಿವೇಶಗಳಿಗೆ ವಿರುದ್ಧವಗಿ ಅನರ್ಥ ಮಾತುಗಳನಾಡಿದರೆ ಸಮಾಜದಲ್ಲಿ ಹಾಸ್ಯಕ್ಕಿಡಾಗುತ್ತೇವೆ, ಈ ರೀತಿ ಮತಿಗೆ ಸಂಭಂದಿಸಿದ ಹಲವಾರು ಅಂಶಗಳನ್ನು ಪ್ರಸ್ತುತ ಕೃತಿಯಲ್ಲಿ ಲೇಖಕರು ಬಹಳ ಅರ್ಥಪೂರ್ನವಾಗಿ ತಿಳಿಸಿದ್ದಾರೆ. ಹೀಗೆ ನಾವಾಡುವ ಮಾತಿಗೆ ಜಗತ್ತನ್ನೇ ಗೆಲ್ಲುವ ಶಕ್ತಿ ಇದೆ. ಹೀಗಾಗಿ ಬರೀ ಮತಿನಿಂದಲೇ ಏನೆಲ್ಲಾ ಸಾಧಿಸಬಹುದು, ನಾವು ಮಾತಾಡಬೇಕಾದಾಗ ಆಡದಿದ್ದರೆ ಕಳೆದುಕೊಳ್ಳುವುದು ಏನು ಎಂಬಿತ್ಯಾದಿ ವಿಷಯಗಳ ಮೇಲೆ ಲೇಖಕರು ಬೆಳಕು ಚೆಲ್ಲಿರುವುದು ಪ್ರಸ್ತುತ ಸಂದರ್ಭಗಳಲ್ಲಿ ಉಪಯುಕ್ತವೆನ್ನಿಸಿದೆ.
©2024 Book Brahma Private Limited.