‘ನಿಮ್ಮ ಬುದ್ದಿವಂತಿಕೆಯೇ ನಿಮ್ಮ ಸಮಸ್ಯೆ’ ಎಂಬ ಉಪಶೀರ್ಷಿಕೆಯ ಮೂಲಕ ಲೇಖಕ ನೆಲ್ಲೀಕೆರೆ ವಿಜಯಕುಮಾರ್ ಅವರು ರಚಿಸಿದ ಕೃತಿ-ನಿರ್ಧರಿಸದಿರು ನಿಲ್ಲು ಮನವೆ..?’. ಬದುಕಿನ ಸ್ವರೂ-ಸ್ವಭಾವ ಎಷ್ಟೊಂದು ಭ್ರಮಾತ್ಮಕ ಹಾಗೂ ಭ್ರಾಂತಾತ್ಮಕವಾಗಿ ಕಾಣಬರುತ್ತದೆ ಎಂದರೆ ಬಹುತೇಕ ವೇಳೆ ನಮ್ಮ ಆಲೋಚನಾ ಕ್ರಮಗಳೇ ತಪ್ಪು ಎಂಬಷ್ಟು ಪರಿಣಾಮಕಾರಿಯಾಗಿರುತ್ತವೆ. ನಮ್ಮ ಕಣ್ಣು ನಮಗೆ ವಂಚಿಸುವಂತಿರುತ್ತದೆ. ನಮ್ಮ ಬುದ್ಧಿ ನಮಗೆ ಕೈ ಕೊಡುತ್ತೆ ಎನಿಸುವಂತಿರುತ್ತದೆ. ಆದ್ದರಿಂದ, ‘ಇದು ನಿಜ’ ಎಂದು ಕಂಡುಬಂದರೂ ಅದನ್ನು ಆ ಕ್ಷಣವೇ ಒಪ್ಪಿಕೊಳ್ಳುವುದು ಸರಿಯಲ್ಲ. ಅದನ್ನು ಪುನರ್ ಪರಿಶೀಲನೆ ಮಾಡುವ ಅಗತ್ಯವನ್ನು ಈ ಕೃತಿಯು ಪ್ರತಿಪಾದಿಸುತ್ತದೆ.
©2025 Book Brahma Private Limited.