ಪ್ರೇರಣಾತ್ಮಕ ಚಿಂತನೆಗಳ ಬರಹಗಾರ ಡಾ. ಬಿ.ವಿ. ಪಟ್ಟಾಭಿರಾಮ್ ಅವರು ರಚಿಸಿದ ಕೃತಿ-ಪಾಸಿಟಿವ್ ಥಿಂಕಿಂಗ್. ಮನಸ್ಸಿನಂತೆ ಮಹಾದೇವ ಎಂಬ ಜನಸಾಮಾನ್ಯರ ಮಾತು ಧನಾತ್ಮಕ ಚಿಂತನೆಯನ್ನೇ ಹೇಳುತ್ತದೆ. ಬದುಕಿನಲ್ಲಿ ಎಷ್ಟೇ ನಿರಾಶೆ-ಹತಾಶೆಗಳು ತುಂಬಿರಲಿ, ಮುಂದೊಂದು ಒಳ್ಳೆಯ ದಿನ ಬರುತ್ತದೆ ಎಂಬ ಭರವಸೆ ಇಟ್ಟುಕೊಂಡಿರಬೇಕು. ಇಲ್ಲವಾದರೆ, ಬದುಕೇ ನಿರಾಶೆಯೊಳಗೆ ಹುದುಗಿ ಬಿಡುತ್ತದೆ. ಇದರಿಂದ, ಇದ್ದ ಬಿದ್ದ ಸ್ವಲ್ಪ ಸುಖದ ಘಳಿಗೆಗಳೂ ಇಲ್ಲವಾಗುತ್ತವೆ. ನಕಾರಾತ್ಮಕ ಚಿಂತನೆಗಳು ನಮ್ಮ ಗುರಿ ಸಾಧನೆಯಲ್ಲಿ ಅಡ್ಡಿಯಾಗುತ್ತದೆ. ಆದ್ದರಿಂದ, ಧನಾತ್ಮಕ ಚಿಂತನೆಯನ್ನು ಹೊಂದಿರಬೇಕು. ಅದು ಬದುಕಿನ ಸಾಫಲ್ಯತೆಯ ಮಾನದಂಡವೂ ಆಗುತ್ತದೆ ಎಂಬ ಚರ್ಚೆಗಳು ಈ ಕೃತಿಯಲ್ಲಿ ಒಳಗೊಂಡಿವೆ.
©2025 Book Brahma Private Limited.