ಸ್ಫರ್ಧಾತ್ಮಕ ಜಗತ್ತಿನಲ್ಲಿ ಎಲ್ಲರಿಗೂ ತಮ್ಮ ಗುರಿಯನ್ನು ತಲುಪಲು ಸಾಧ್ಯವಾಗದು. ಬದಲಾದ ಜೀವನಶೈಲಿ ನಮ್ಮನ್ನು ಒತ್ತಡಕ್ಕೆ ತಳ್ಳುತ್ತಿದೆ. ಸೋತು ತಲೆಮೇಲೆ ಕೈ ಇಟ್ಟು ಕುಳಿತ ವ್ಯಕ್ತಿಗೆ “ಏನೂ ಆಗೋದಿಲ್ಲ ಹೆದರಬೇಡ' ಎನ್ನುವ ಸಮಾಧಾನದ ಮಾತೇ ಎಷ್ಟೋ ಧೈರ್ಯ ನೀಡುತ್ತದೆ. ಆ ಕೆಲಸವನ್ನು ಪತ್ರಕರ್ತ ಗೋಪಾಲ್ ಯಡಗೆರೆ ’ಸೋಲನ್ನು ಸೋಲಿಸಿ' ಪುಸ್ತಕದ ಮೂಲಕ ಮಾಡಿದ್ದಾರೆ.
ಯಾರದೋ ಬದುಕಿನ ಯಾವುದೋ ಸ್ಫೂರ್ತಿದಾಯಕ ಕಥೆಗಳು ಜನರ ಆತ್ಮಸ್ಥೆರ್ಯವನ್ನು ಹೆಚ್ಚಿಸುತ್ತವೆ. ಇಲ್ಲಿಯ ಬರಹಗಳು ಭರವಸೆ ಕಳೆದುಕೊಂಡ ಬದುಕಿಗೆ ಹೊಸ ಚೈತನ್ಯ ನೀಡುವ ನಿಟ್ಟಿನಲ್ಲಿ ಸಂದೇಶಗಳನ್ನು ಒಳಗೊಂಡಿವೆ.
ಲೇಖಕ, ಪತ್ರಕರ್ತ ಗೋಪಾಲ್ ಎಸ್. ಯಡಗೆರೆ, 1963 ಜುಲೈ 14 ರಂದು ಚಿಕ್ಕಮಗಳೂರು ಜಿಲ್ಲೆ ಎನ್. ಆರ್. ಪುರ ತಾಲೂಕು ಯಡಗೆರೆಯಲ್ಲಿ ಜನಿಸಿದರು. ತಂದೆ ಸಿಂಗಪ್ಪಯ್ಯ, ತಾಯಿ ಪದ್ಮಾವತಿ. ಉದಯವಾಣಿ ಪತ್ರಿಕೆಯಲ್ಲಿ 28 ವರ್ಷ ಕಾಲ ಹಿರಿಯ ವರದಿಗಾರರಾಗಿ ಕೆಲಸ ಮಾಡಿದ ನಂತರ, 2017 ರಿಂದ ಕನ್ನಡಪ್ರಭ ಪತ್ರಿಕೆಯ ಶಿವಮೊಗ್ಗ ಆವೃತ್ತಿಯ ಪ್ರಧಾನ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ’ನಾನಾಗದ ನಾನು’, ಕವನ ಸಂಕಲನ, ’ಸೋಲನ್ನು ಸೋಲಿಸು’ ಮತ್ತು ’ಮಿಸ್ಡ್ ಕಾಲ್’ ಸಾಹಿತ್ಯ ಕೃತಿಗಳನ್ನು ಹೊರ ತಂದಿದ್ದಾರೆ. ’ಮಾನವೀಯ ವರದಿಗಾಗಿ ಭೂಪಾಳಂ ಚಂದ್ರಶೇಖರ ಪ್ರಶಸ್ತಿ, ಸುವರ್ಣ ಲೇಡೀಸ್ ಕ್ಲಬ್‍ನ ಸುವರ್ಣ ಪ್ರಶಸ್ತಿ, ಗುರುಸಿದ್ದಶ್ರೀ ...
READ MORE