ಸುಖವಾಗಿರಬೇಕೆಂಬ ಬಯಕೆ ಎಲ್ಲರಲ್ಲೂ ಇರುತ್ತದೆ. ಹಾಗೆಂದು ಸುಖವನ್ನು ಕಿತ್ತು ಮತ್ತೊಬ್ಬರ ಬದುಕನ್ನು ಮೂರಾಬಟ್ಟೆ ಮಾಡಿರುವ ಜಗತ್ತನ್ನು ಅಂತಾರಾಳದಿಂದ ನೋಡಿದರೆ ಹಾಗೆ ಮಾಡದೆಯೂ ನೆಮ್ಮದಿಯನ್ನು ಕಂಡುಕೊಳ್ಳಬಹುದಾದ ಮಾರ್ಗವನ್ನು ಲೇಖಕ ಗಿರಿಮನೆ ಶ್ಯಾಮರಾವ್ ’ಸುಖ ಯಾರ ಸೊತ್ತು’ ಪುಸ್ತಕದಲ್ಲಿ ತಿಳಿಸಿದ್ದಾರೆ.
ಸುಖದ ಗುರಿಯನ್ನು ತಲುಪಲು ಬೇಕಿರುವ ಸಂಕಲ್ಪ ಶಕ್ತಿಯನ್ನು ವಿವರಿಸಿದ್ದಾರೆ.ನಾವು ಇಷ್ಟೊಂದು ಹಂಬಲಿಸುವ ಆ ಸುಖ ಎಲ್ಲಿದೆ? ಯಾವುದು ನಿಜ? ಸುಖದ ಭ್ರಮೆ ತರಿಸಿ ದು:ಖ ಕೊಡುವುದು ಯಾವುದು? ಇಂತಹ ಹತ್ತು ಹಲವು ಸಂದಿಗ್ಧ ತುಮುಲ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಈ ಕೃತಿ ರಚಿಸಲಾಗಿದೆ.
©2025 Book Brahma Private Limited.