ವಿಜ್ಞಾನ ಸಾಹಿತ್ಯದ ಮೂಲಕ ಜನಪ್ರಿಯರಾದ ಜಿ.ಟಿ. ನಾರಾಯಣರಾವ್. 'ಸವಾಲನ್ನು ಎದುರಿಸುವ ಛಲ’ ಒಂದು ರೀತಿಯಲ್ಲಿ ಅವರ ಚಿಂತನರೂಪದ ಬರಹ. ನಾವು ಬಲ್ಲ ವಿಷಯಗಳನ್ನೇ ಮರುಪ್ರಶ್ನಿಸಿಕೊಂಡರೆ ಅಪರಿಚಿತವೆನಿಸಿ ಕಾಡುತ್ತವೆ. ಅಂತಹ ವಿಷಯಗಳನ್ನು ಆಯ್ದು ಅವುಗಳನ್ನು ನಿರ್ವಚಿಸಲು ಹೊರಡುತ್ತಾರೆ ಲೇಖಕರು. ಉದಾಹರಣೆಗೆ ಶಿಸ್ತು, ವಿನಯ, ಶೀಲ ಇತ್ಯಾದಿ ವಿಚಾರಗಳು ಎಲ್ಲರಿಗೂ ಗೊತ್ತಿರುವ ಸಂಗತಿಗಳು. ಆದರೆ ಅದನ್ನೇ ಮರುಪ್ರಶ್ನಿಸಿಕೊಂಡು ಚಿಂತನೆಗೆ ತೊಡಗಿದರೆ ಅನೇಕ ವಿಚಾರಗಳು ಹೊಳೆಯುತ್ತವೆ. ಅಂತಹ ವಿಚಾರಗಳನ್ನೇ ಕೃತಿ ಪ್ರಧಾನವಾಗಿ ಕೇಂದ್ರೀಕರಿಸಿದೆ.
ಜಿ.ಟಿ.ನಾ ಅವರ ಸಮಕಾಲೀನರೇ ಆಗಿದ್ದ ಮತ್ತೊಬ್ಬ ವಿಜ್ಞಾನ ಬರಹಗಾರ ಅಡ್ಯನಡ್ಕ ಕೃಷ್ಣಭಟ್ ಅವರ ಮುನ್ನುಡಿ ಪುಸ್ತಕಕ್ಕೆ ಇದೆ.
©2025 Book Brahma Private Limited.