ಸಂಸಾರದಲ್ಲಿ ಮೂಡುವ ವಿರಸ, ಮನಸ್ತಾಪಗಳನ್ನು ಎದುರಿಸಬೇಕಾದ ಸಂಗತಿಗಳು ಬಹಳ. ಒಮ್ಮೊಮ್ಮೆ ನೋಡುತ್ತಲೇ ಜಗಳವಾಡುತ್ತಾ, ಒಬ್ಬರ ಮೇಲೊಬ್ಬರು ಆರೋಪ ಹೊರಿಸುತ್ತಾ, ಮಾತು ಬೆಳೆಸುತ್ತಾರೆ. ಅದೆಲ್ಲವೂ, ಸಂಸಾರಿಕ ಜೀವನದಲ್ಲಿ ಸಾಮಾನ್ಯವೇ. ಆದರೂ, ಹಲವು ದೃಷ್ಟಿಕೋನಗಳಿಂದ ಪರೀಕ್ಷಿಸಿ ಬಗೆಹರಿಸಿಕೊಳ್ಳುವ ಬಗೆ ತಿಳಿಯುವುದಿಲ್ಲ. ಹೀಗೆ ಮನಸ್ತಾಪಗಳು ಹೆಮ್ಮರವಾಗುತ್ತಾ ಮಕ್ಕಳೊಂದು ದಿಕ್ಕು, ತಾವೊಂದು ದಿಕ್ಕು ಎಂಬಂತಾಗುತ್ತದೆ. ಬಂದವರೊಂದಿಗೆ ಸಂಗಾತಿಯನ್ನು ದೂರುತ್ತಾ, ವೃದ್ದರನ್ನು ಬೈಯುತ್ತಾ, ಮತ್ತೊಬ್ಬರ ಮನೆಗೆ ಹೋಗಿ ಎಲ್ಲ ಗುಟ್ಟು ತಾಪತ್ರಯಗಳನ್ನು ಅವರ ಮುಂದೆ ಹರಡುತ್ತಾರೆ. ಈ ಎಲ್ಲವೈಮನಸ್ಸುಗಳನ್ನು ಪ್ರೀತಿಯಿಂದ, ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡು ಮಧುರ ದಾಂಪತ್ಯ ಸಾಗಿಸಲು ಲೇಖಕ ಗಿರಿಮನೆ ಶ್ಶಾಮರಾವ್ ಅವರು ಅನೇಕ ಸಲಹೆಗಳನ್ನು ನೀಡಿದ್ದಾರೆ.
ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ...
READ MORE