ಗುರೂಜಿ ಶ್ರೀ ಋಷಿ ಪ್ರಭಾಕರ ಅವರ ಮೂಲ ಜ್ಞಾನವನ್ನು ‘ಸುಮ್ಮನಿರಬಾರದೆ...?’ ಶೀರ್ಷಿಕೆಯ ಮೂಲಕ ಲೇಖಕ ನೆಲ್ಲೀಕೆರೆ ವಿಜಯಕುಮಾರ್ ಅವರು ಸಂಗ್ರಹಿಸಿ, ರಚಿಸಿದ ಕೃತಿ. ‘ಪ್ರಯಾಸಕರ ಬದುಕಿಗೊಂದು ಗುಡ್ ಬೈ’ ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. ಬದುಕಿನ ಬಹುತೇಕ ಘಟನೆಗಳು ಆಕಸ್ಮಿಕವಾಗಿರುತ್ತವೆ. ಅವುಗಳ ಮೇಲೆ ಮನುಷ್ಯನ ಹಿಡಿತವಿರುವುದಿಲ್ಲ. ನಮ್ಮ ಪ್ರಯತ್ನಕ್ಕೆ ಮೀರಿದ ಘಟನೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಅದನ್ನು, ಹೇಗೆ ಸಂಭವಿಸಲು ಸಾಧ್ಯವೋ ಹಾಗೆ ಸಂಭವಿಸಲು ಬಿಡಬೇಕು. ಸಮಸ್ಯೆಯ ಪರಿಹಾರವು ನಮ್ಮ ಪ್ರಯತ್ನದ ಮಿತಿಯಲ್ಲಿದ್ದರೆ ಮಾತ್ರ ಯತ್ಸನಿಸಬೇಕು. ಆಗ ಅದಕ್ಕೊಂದು ಆರ್ಥವಿರುತ್ತದೆ. ತಪ್ಪಿದರೆ, ನಮ್ಮ ನೆಮ್ಮದಿ ಹಾಳು ಮಾಡಿಕೊಳ್ಳಲು ನಾವೇ ಕಾರಣರಾಗುತ್ತೇವೆ. ಇಂತಹ ಸಂಗತಿಗಳನ್ನು ಒಳಗೊಂಡ ಕೃತಿ ಇದು.
©2025 Book Brahma Private Limited.