ಅತ್ಯುತ್ತಮ ಮನೋವೈದ್ಯರಲ್ಲೊ ಒಬ್ಬರಾದ ಪಿ.ವಿ. ಭಂಡಾರಿಯವರು ಮನಶಾಸ್ತ್ರಜ್ಞ ನಾಗರಾಜ ಮೂರ್ತಿ ಅವರೊಡನೆ ಸೇರಿ ಬರೆದ ಕೃತಿ ’ಬಾಳುವಂಥ ಹೂವೇ, ಬಾಡುವಾಸೆ ಏಕೆ?”. ಪಿ.ವಿ. ಭಂಡಾರಿ ಎರಡು ದಶಕಗಳ ಕಾಲ ಮದ್ಯವ್ಯಸನದ ವಿರುದ್ಧ ಹೋರಾಡಿದವರು. ಅದಕ್ಕೆಂದೇ ರಾಜ್ಯ ಸರ್ಕಾರದಿಂದ ’ಸಂಯಮ’ ಪ್ರಶಸ್ಗಿಗೂ ಪಾತ್ರರಾದವರು. ನಾಗರಾಜ ಮೂರ್ತಿ 13 ವರ್ಷಗಳ ಕಾಲ ಮನಃಶಾಸ್ತ್ರ ಕ್ಷೇತ್ರದಲ್ಲಿ ಕೆಲಸ ಮಾಡಿದವರು.
ಮದ್ಯಪಾನದ ಸಮಸ್ಯೆಗಳನ್ನು ವಿವರಿಸುವ ಕೃತಿ, ಚಟಕ್ಕೆ ಕಾರಣಗಳು ಮತ್ತು ಅದಕ್ಕೆ ಇರುವ ಪರಿಹಾರೋಪಾಯಗಳನ್ನು ಸೂಚಿಸುತ್ತದೆ. ವ್ಯಸನಕ್ಕೆ ಸಂಬಂಧಿಸಿದ ಮೌಢ್ಯ, ಅದರಿಂದ ಜನರು ದಾಸರಾಗುವುದು, ವಿವಿಧ ಚಿಕಿತ್ಸಾ ವಿಧಾನದ ಮೂಲಕ ಮದ್ಯಪಾನ ಇಲ್ಲವಾದ ಬಗೆಯನ್ನು ವಿವರಿಸುತ್ತದೆ.
©2025 Book Brahma Private Limited.