ದೇಹದ ಎಲ್ಲಾ ಆವಯವಗಳು ಸರಿ ಇದ್ದೂ ಯಾವುದೇ ಕೊರತೆ ಇಲ್ಲದಿದ್ದರೂ ಸಾಧನೆ ಶೂನ್ಯವಾಗಿರುತ್ತದೆ. ಆಕಸ್ಮಿಕ ಅವಘಡಗಳಲ್ಲಿ ಕೈ ಕಾಲು ಕಳೆದಕೊಂಡು ನಿರಂತರ ಪ್ರಯತ್ನ ಹೋರಾಟಗಳ ಮೂಲಕ ಸಾಧನೆಗೈದವರ ಬಗ್ಗೆ ವಿವರಿಸಲಾಗಿದೆ. ಬದುಕಿಗೆ ಸ್ವೂರ್ತಿನಿಡಬಲ್ಲ 31 ನೈಜ ಕಥೆಗಳು ಈ ಕೃತಿಯಲ್ಲಿದೆ. ಒಂಟಿ ಕಾಲಿನಲ್ಲಿಯೇ ಎವರೆಸ್ಟ್ ಶಿಖರವನ್ನು ಏರಿದ ಅರುಣಿಮಾ, ನೃತ್ಯದಲ್ಲಿ ಅದ್ಭುತ ಸಾಧನೆಗೈದ ನಾಟ್ಯರಾಣಿ ಸುಧಾ ಚಂದ್ರನ್, ವಿದ್ಯುತ್ ಅವಘಡದಲ್ಲಿ ಕೈಗಳನ್ನು ಕಳೆದುಕೊಂಡರೂ ಅಂತಾರಾಷ್ಟ್ರೀಯ ಈಜುಗಾರ, ನೃತ್ಯಗಾರ, ಕರಾಟೆಪಟು ಆಗಿರುವ ಕೋಲಾರದ ವಿಶ್ವಾಸ್, ಮೂವತ್ತು ಸರ್ಜರಿಗಳಾಗಿದ್ದರೂ ಪೇಂಟಿಂಗ್ ಎಂದರೆ ಜೀವ ಬಿಡುವ ಫ್ರೀಡಾ, ಕುರುಡುತನವನ್ನೇ ಪ್ರೇರಕ ಶಕ್ತಿಯಾಗಿಸಿಕೊಂಡ ಹೆಲನ್ ಕೆಲ್ಲರ್, ಅಶ್ವಿನಿ ಅಂಗಡಿ, ಇಡೀ ದೇಹವೇ ಕೃಶವಾಗಿದ್ದರೂ ಗಾಲಿ ಕುರ್ಚಿಯಲ್ಲಿ ಕುಳಿತು ಖಗೋಳವನ್ನೇ ಸುತ್ತಿದ ಹಾಕಿಂಗ್ ಮುಂತಾದವರ ಸಾಧನೆಗಳ ಕಥೆಯನ್ನು ವಿವರಿಸಲಾಗಿದೆ.
©2025 Book Brahma Private Limited.