‘ಲೀಡರ್ ಷಿಪ್’ ಈ ಕೃತಿಯನ್ನು ಖ್ಯಾತ ಲೇಖಕ ಹಾಗೂ ಮನೋಚಿಕಿತ್ಸಕ ಡಾ. ಬಿ.ವಿ. ಪಟ್ಟಾಭಿರಾಮ್ ಅವರು ರಚಿಸಿದ ಕೃತಿ. ಒಂದು ಗುಂಪಿಗೆ ಉತ್ತಮ ನಾಯಕತ್ವ ಇದ್ದರೆ ಆ ಗುಂಪು ತನ್ನ ನಿಗದಿತ ಗುರಿ ತಲುಪುವುದು, ಇಲ್ಲದಿದ್ದರೆ, ಆ ಗುಂಪು ದಿಕ್ಕೆಟ್ಟು ಹೋಗುತ್ತದೆ. ಹೀಗಾಗಿ, ಗುಂಪನ್ನು ಸರಿ ದಾರಿಯಲ್ಲಿ ನಡೆಸುವ ಸಾಮರ್ಥ್ಯ ನಾಯಕತ್ವದ ಗುಣ ಇರುವ ನಾಯಕನಿಗೆ ಇರುತ್ತದೆ. ಈ ನಾಯಕನಿಗೆ ತನ್ನ ಹಿಂದೆ ಬರುವವರ ಕಾಳಜಿ ಇರುತ್ತದೆ. ಅವರ ಉದ್ಧಾರವು ತನ್ನ ಉದ್ಧಾರ ಎಂದೇ ನಾಯಕ ತಿಳಿದುಕೊಂಡಿರುತ್ತಾನೆ. ನಾಯಕ, ಸದಾ ಅಧಿಕಾರಕ್ಕೆ ಅಂಟಿಕೊಳ್ಳುವುದಿಲ್ಲ. ತನ್ನ ಹಿಂಬಾಲಕನಿಗೂ ಅಧಿಕಾರ ನೀಡಿ, ಆತನಲ್ಲಿ ಗುಂಪು ನಡೆಸಿಕೊಂಡು ಹೋಗಲು ನೆರವಾಗುತ್ತಾನೆ. ತಾನೂ ನಡೆಯಬೇಕು, ತನ್ನ ಹಿಂಬಾಲಕರೂ ನಡೆಯುವಂತೆ ನೆರವಾಗುವವನು ನಾಯಕ ಎನಿಸಿಕೊಳ್ಳುತ್ತಾನೆ. ತಾನೋಬ್ಬನೇ ಅಭಿವೃದ್ಧಿಯಾಗುವ ಸ್ವಾರ್ಥ ಆತನಲ್ಲಿ ಇರದು. ಇಂತಹ ನಾಯಕತ್ವದ ಗುಣ ಹೇಗೆ ಬೆಳೆಸಿಕೊಳ್ಳಬೇಕು ಎಂಬುದರ ಕಾಣ್ಕೆಗಳನ್ನು ಈ ಕೃತಿ ನೀಡುತ್ತದೆ. ಗೆಲುವು ಸಾಧಿಸಲು ಅರ್ಹತೆ ಇಲ್ಲದ ವ್ಯಕ್ತಿಯನ್ನು ದೇವರು ಈವರೆಗೂ ಸೃಷ್ಟಿಸಿಲ್ಲ ಎನ್ನುವ ಮೂಲಕ ಲೇಖಕರು ವ್ಯಕ್ತಿಯಲ್ಲಿಯ ಹತಾಶೆ-ನಿರಾಶೆ-ಕೀಳರಿಮೆಗಳನ್ನು ತೊಡೆದು ಹಾಕಲು ತಮ್ಮ ಬರಹ ಮೂಲಕ ಯತ್ನಿಸಿದ್ದಾರೆ.
©2025 Book Brahma Private Limited.