‘ವ್ಯಕ್ತಿತ್ವ ವಿಕಸನಕ್ಕೆ ಬೆಳಕು ವಿಸ್ತಾರ’ ಲೇಖಕ ಕೆ. ಶ್ರೀನಿವಾಸ ರೆಡ್ಡಿ ಅವರ ಲೇಖನಗಳ ಸಂಕಲನ. ಈ ಕೃತಿಯಲ್ಲಿ 108 ಲೇಖನಗಳಿದ್ದು, ಪುಸ್ತಕದ ಹೆಸರೇ ಹೇಳುವಂತೆ ಇವು ನಮ್ಮ ಮನಸ್ಸು ವಿಸ್ತಾರಗೊಳ್ಳುವುದಕ್ಕೆ, ನಮ್ಮ ಆಲೋಚನೆಗಳು ವೈವಿಧ್ಯಮಯಗೊಳ್ಳುವುದಕ್ಕೆ, ಸೃಜನಶೀಲವಾಗುವುದಕ್ಕೆ, ನವನವೀನಗೊಳ್ಳುವುದಕ್ಕೆ ಸಂಬಂಧಿಸಿವೆ.
ಇಲ್ಲಿನ ಲೇಖನಗಳು ನಮ್ಮ ಮನಸ್ಥಿತಿಯನ್ನು ಬಿಂಬಿಸುವುದರೊಂದಿಗೆ ನಾವು ನಮ್ಮನ್ನು ನೋಡಿಕೊಳ್ಳಲು, ಅರ್ಥ ಮಾಡಿಕೊಳ್ಳಲು, ಸದಾ ಜಾಗೃತವಾಗಿರಲು ಪ್ರೇರೇಪಿಸುತ್ತವೆ. ಎಂತವುದೇ ಪರಿಸ್ಥಿತಿ, ಸನ್ನಿವೇಶಗಳು ಎದುರಾದರೂ ಸಹ ಅದನ್ನು ಎದುರಿಸುವ ಆತ್ಮಸ್ಥೆರ್ಯವನ್ನು ತುಂಬುತ್ತವೆ. ನಮ್ಮ ಜೀವನವನ್ನು ಕ್ರಿಯಾತ್ಮಕಗೊಳಿಸುವಲ್ಲಿ ಗೆಲ್ಲುವಲ್ಲಿ ಸ್ಫೂರ್ತಿಯನ್ನು ತುಂಬುತ್ತವೆ. ಜೀವನದಲ್ಲಿ ಏನಾದರೊಂದು ಸಾಧಿಸಲೇಬೇಕೆಂಬ ಹಠಮಾರಿಗಳಿಗೆ ಇದೊಂದು ಓದಲೇಬೇಕಾದ ಪುಸ್ತಕ.
ಕೆ. ಶ್ರೀನಿವಾಸ ರೆಡ್ಡಿ ಅವರು 2006 ರಲ್ಲಿ ಕರ್ನಾಟಕ ನಾಗರೀಕ ಸೇವೆಗೆ ಸೇರಿ ಪ್ರಸ್ತುತ ಕೃಷಿ ಮಾರಾಟ ಇಲಾಖೆಯ ಚಿತ್ರದುರ್ಗ ಜಿಲ್ಲೆಯ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕಂದಿನಿಂದಲೂ ಕತೆ, ಕವನ, ನಾಟಕ, ಹಾಡುಗಾರಿಕೆಯಲ್ಲಿ ಆಸಕ್ತಿಯನ್ನು ಹೊಂದಿರುವ ಇವರು, 'ಮಣ್ಣಿನ ಮೆರವಣಿಗೆ', 'ಕಾಡುವ ಕ್ಷಣಗಳ ನಡುವೆ' ಕವನ ಸಂಕಲನ ಸೇರಿದಂತೆ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ವಿಶೇಷವಾಗಿ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಇವರು ಒಂದು ಹೆಜ್ಜೆ ಮುಂದೆ', “ಹನಿಗಳು' ಪುಸ್ತಕಗಳು ಪ್ರಕಟವಾಗಿವೆ. ಜೊತೆಗೆ `ವಿಸ್ತಾರ' ಎಂಬ ಕೃತಿಯನ್ನು ರಚಿಸಿ, ಪ್ರಕಟಿಸಿದ್ದಾರೆ. ...
READ MORE