ಜೀವನದ ಹಲವು ಸಂಗತಿಗಳನ್ನು ಹಿಡಿದಿಟ್ಟಿರುವ 24 ಅಧ್ಯಾಯಗಳ ಕೃತಿ ಲೇಖಕ ಜಯಪ್ರಕಾಶ ಪುತ್ತೂರು ಅವರ ‘ಬದುಕಲು ಬಿಡಿ ಪ್ಲೀಸ್’. ಬದುಕಿಗೆ ಬೇಕಾಗುವ ಹಲವಾರು ಸಂಗತಿಗಳನ್ನು, ವಿಷಯಗಳನ್ನು ಮುಟ್ಟಿಸುವಲ್ಲಿ ಈ ಕೃತಿಯು ಸಫಲವಾಗಿದೆ. ಒಂದೊಂದು ಅಧ್ಯಾಯವು ಕೂಡ ಹೊಸಹೊಸ ವಿಷಯ ಹಾಗೂ ಅದಕ್ಕೆ ತಕ್ಕುದಾದ ಡಿವಿಜಿ ಮತ್ತವರ ಉಕ್ತಿ, ವಚನಗಳನ್ನು ಸೇರಿಸಿ, ಲಘು ಹಾಸ್ಯದಿಂದ ಕರ್ತವ್ಯ, ರಾಷ್ಟ್ರ ಪ್ರೇಮದವರೆಗೂ ಬರೆದು, ಎಲ್ಲಿಯೂ ಬೋರ್ ಆಗದ ರೀತಿಯಲ್ಲಿ ಕುತೂಹಲ ಬರಿಸುವ ವಿಚಾರಗಳನ್ನು ಹೆಣೆದಿದ್ದಾರೆ. ಇದನ್ನು ಒಂದು ಪರ್ಸನಾಲಿಟಿ ಡೆವಲಪ್ ಮೆಂಟ್ ಪುಸ್ತಕವೂ ಆಗಿದೆ.
©2024 Book Brahma Private Limited.