ಶಿಕ್ಷಣ ಎಲ್ಲರ ಮೂಲಭೂತ ಹಕ್ಕು. ಭಾರತೀಯ ಸಂವಿಧಾನದ ಪ್ರಕಾರ ಯಾರಿಂದಲೂ ಈ ಹಕ್ಕನ್ನು ಯಾರಿಂದಲೂ ಕಸಿದುಕೊಳ್ಳುವಂತಿಲ್ಲ. ಈ ಪುಸ್ತಕದಲ್ಲಿ ಮಕ್ಕಳು ಪಡೆಯಬಹುದಾದ ಹಕ್ಕುಗಳು ಏನು ಮತ್ತು ಶಿಕ್ಷಕರು ನಿರ್ವಹಿಸಬೇಕಾದಂತಹ ಹೊಣೆಗಾರಿಕೆಗಳ ಕುರಿತು ವಿವರವಾಗಿ ಚರ್ಚಿಸಲಾಗಿದೆ. ವೈಜ್ಞಾನಿಕ ಮನೋವೃತ್ತಿ ಮಕ್ಕಳ ಹಕ್ಕು, ಶಿಕ್ಷಕರ ಹೊಣೆ ಪುಸ್ತಕವನ್ನು ಓದುತ್ತಾ ಸಾಗಿದಂತೆ ಮಕ್ಕಳಿಗಿರುವ ಹಕ್ಕಿನ ಕುರಿತಾದಂತಹ ಇನ್ನಷ್ಟು ಮಾಹಿತಿ ಓದುಗರಿಗೆ ಸಿಗುತ್ತಾ ಹೋಗುತ್ತದೆ. ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುತ್ತಾರೆ. ಗುರುಗಳನ್ನು ಭಾರತದ ಸಂಪ್ರದಾಯ ದೇವರಂತೆ ಕಾಣಲು ಹೇಳುತ್ತದೆ. ಅಂತಹ ಪವಿತ್ರವಾದ ವೃತ್ತಿಯನ್ನು ನಿಭಾಯಿಸುವ ಶಿಕ್ಷಕರಿಗೆ ಅವರದ್ದೇ ಆದಂತಹ ಹೊಣೆಗಾರಿಕೆಯಿದೆ. ಆದರೆ ಇತ್ತೀಚಿಗಿನ ದಿನಗಳಲ್ಲಿ ಶಿಕ್ಷಣವನ್ನು ಕೇವಲ ಲಾಭದ ಉದ್ದೇಶಕ್ಕಾಗಿ ಮಾತ್ರ ಕಾಣುವ ಮತ್ತು ಅಂಕಗಳಿಗೆ ವಿದ್ಯಾರ್ಥಿಗಳನ್ನು ಕಟ್ಟಿಹಾಕುವು ಮೂಲಕ ಶಿಕ್ಷಣದ ಮೂಲಭೂತ ಉದ್ದೇಶವನ್ನು ಮರೆಮಾಚಲಾಗಿದೆ. ಇಂತಹ ಸಂದರ್ಭದಲ್ಲಿ ಶಿಕ್ಷಕರಾದವರಿಗೆ ಅವರ ಕರ್ತವ್ಯಗಳನ್ನು ಮತ್ತೊಮ್ಮೆ ನೆನಪಿಸುವ ಕೃತಿ ಇದು. ಸರಳ ಕನ್ನಡದಲ್ಲಿ ಎಲ್ಲರೂ ಅರ್ಥೈಸುವ ರೀತಿಯಲ್ಲಿ ಮೂಡಿ ಬಂದಿರುವ ಉತ್ತಮವಾದ ಕೃತಿ ಇದು.
©2024 Book Brahma Private Limited.