ಆರ್. ಬಿ. ಗುರುಬಸವರಾಜ ಅವರು ಬರೆದಿರುವ ವ್ಯಕ್ತಿತ್ವ ವಿಕಸನ ಕೃತಿಯಾಗಿದೆ ಇದು. ಸ್ವತಃ ಶಿಕ್ಷಕರಾಗಿರುವ ಲೇಖಕರು, ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ ಮಾರ್ಗದರ್ಶನವಾಗುವಂತೆ, ಅತ್ಯಂತ ಸರಳವಾಗಿ, ನೇರವಾಗಿ ಬರೆದಿದ್ದಾರೆ. ಮುನ್ನುಡಿ ಹೇಳುವಂತೆ ಇವು ಬರೀ ಶೈಕ್ಷಣಿಕ ಲೇಖನಗಳಲ್ಲ. ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತಹ ಪ್ರಾಯೋಗಿಕ ಅಂಶಗಳು ಇಲ್ಲಿವೆ. ಮಕ್ಕಳು, ಶಿಕ್ಷಕರು ಹಾಗೂ ಪೋಷಕರು ಸೇರಿದಂತೆ ಎಲ್ಲರೂ ಅನುಸರಿಸಬೇಕಾದ ಮಾರ್ಗ ಸೂಚಿಗಳನ್ನು ಇಲ್ಲಿನ ಲೇಖನಗಳು ಉದಾಹರಣೆ ಸಮೇತ ವಿವರಿಸುತ್ತವೆ. ಶಾಲೆಯನ್ನು ಪ್ರಯೋಗ ಶಾಲೆಯಾಗಿಸಿ ತಾವು ಅನುಷ್ಠಾನಗೊಳಿಸಿದ ಅಂಶಗಳನ್ನು ಇಲ್ಲಿ ನೀಡಿದ್ದಾರೆ. ಅವರ ವ್ಯಕ್ತಿತ್ವಗಳ ನಾನಾ ರಾಜಕೀಯ ಕಾರಣಗಳಿಗಾಗಿ ಸಂಕುಚಿತಗೊಳ್ಳುತ್ತಿವೆ. ಅಂತಹ ಶಿಕ್ಷಕರು, ತಮ್ಮ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಹೇಗೆ ವಿಕಸನಗೊಳಿಸಬಲ್ಲರು? ಈ ಹಿನ್ನೆಲೆಯಲ್ಲಿ ಈ ಕಿರು ಕೃತಿ, ಶಿಕ್ಷಕರಿಗೆ ಒಂದು ಪ್ರಾಥಮಿಕ ಕೈಪಿಡಿಯಾಗಿದೆ.
©2024 Book Brahma Private Limited.