ವ್ಯಕ್ತಿತ್ವ ವಿಕಸನ ತರಬೇತುದಾರರಾದ ಲೇಖಕ ಜಯಪ್ರಕಾಶ ನಾಗತಿಹಳ್ಳಿ ಅವರ ಕೃತಿ-ಕೀಳರಿಮೆ. ನಮ್ಮ ವ್ಯಕ್ತಿತ್ವದ ವಿಭಿನ್ನ ಗುಣ-ಲಕ್ಷಣಗಳು ವಿಕಸನ ಹೊಂದಬೇಕಾದರೆ ಮೊದಲು ನಮ್ಮಲ್ಲಿಯ ಕೀಳರಿಮೆಯಿಂದ ಹೊರಬೇಕು. ಮತ್ತೊಬ್ಬರೊಂದಿಗೆ ಹೋಲಿಸಿಕೊಂಡು ನಮ್ಮ ಸಾಮರ್ಥ್ಯವನ್ನು ಕೀಳಾಗಿ ಕಾಣಬಾರದು. ನಮ್ಮ ದೌರ್ಬಲ್ಯಗಳತ್ತಲೇ ಹೆಚ್ಚು ಗಮನ ನೀಡುವುದು ಸರಿಯಲ್ಲ. ನಮ್ಮ ಪ್ರತಿಭೆಯ ಅಭಿವ್ಯಕ್ತಿ ಕುರಿತಂತೆ ನಮಗೆ ತುಂಬಾ ವಿಶ್ವಾಸ ಇಟ್ಟುಕೊಳ್ಳಬೇಕು. ತಪ್ಪಿದಲ್ಲಿ, ನಮ್ಮ ಪ್ರತಿಭೆಯನ್ನು ನಾವೇ ಕೊಲೆ ಮಾಡಿಕೊಂಡಂತೆ. ಕೀಳರಿಮೆಯಿಂದ ಹೊರಬರಲು ಮೊದಲು ನಮ್ಮ ಬಗ್ಗೆ ನಮಗೆ ಪೂರ್ಣ ವಿಶ್ವಾಸದೊಂದಿಗೆ ಮುನ್ನಡೆಯುವುದನ್ನು ಕಲಿಯಬೇಕು. ಇಂತಹ ಸಲಹೆ, ಮಾರ್ಗದರ್ಶನಗಳ ಮೂಲಕ ಓದುಗರ ವಿಶ್ವಾಸವನ್ನು ಹೆಚ್ಚಿಸುವ ಹಾಗೂ ಅ ದಿಸೆಯಲ್ಲಿ ಪ್ರೇರಣೆ ನೀಡುವ ಕೃತಿ ಇದು.
©2025 Book Brahma Private Limited.