ಲೇಖಕಿ ದೀಪಾ ಹಿರೇಗುತ್ತಿ ಅವರು ಬರೆದ ವ್ಯಕ್ತಿತ್ವ ವಿಕಸನದ ಬರಹಗಳ ಕೃತಿ 'ಸೋಲೆಂಬ ಗೆಲುವು'. ಪುಸ್ತಕವು ಯುವಜನತೆಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಹಲವಾರು ಒಳ್ಳೆಯ ವಿಚಾರಗಳನ್ನು ಹೇಳಿಕೊಡುತ್ತದೆ. ಆಧುನಿಕ ಜೀವನಶೈಲಿ, ಕೆಲಸ, ಅದರಿಂದ ಆಗುವ ಒತ್ತಡಗಳು ಹೀಗೆ ಪ್ರತೀ ದಿನದ ಮಾನಸಿಕ ಹಾಗೂ ದೈಹಿಕ ಅಸಮತೋಲನವನ್ನು ಹೇಗೆ ನಿಭಾಯಿಸಬಹುದು ಹಾಗೂ ಸೋಲನ್ನು ಹೇಗೆ ಹಿಮ್ಮೆಟ್ಟಿಸಿ ಮುಂದೆ ಬರಬಹುದು ಎಂಬ ಪಾಠವನ್ನೂ ಇಲ್ಲಿನ ಬರಹಗಳು ಮನದಟ್ಟುಮಾಡಲು ಪ್ರಯತ್ನಿಸುತ್ತವೆ. ಜೀವನ ಎಂದಮೇಲೆ ಅಲ್ಲಿ ಸಮಸ್ಯೆಗಳು ಕಂಡುಬರುವುದು ಸಹಜ. ಆದರೆ ನಾವು ಕಾಣುವ ದೃಷ್ಟಿಕೋನವನ್ನು ಬದಲಾಯಿಸಿಕೊಂಡರೆ ಜೀವನದಲ್ಲಿ ಸೋಲು ಎಂಬ ಪದವೇ ನಮ್ಮ ಬಳಿ ಸುಳಿಯಲಾರದು. ಅದಕ್ಕಾಗಿ ತೆಗೆದುಕೊಳ್ಳಬೇಕಾದ ಆರೋಗ್ಯಕರ ಮಾರ್ಗಗಳನ್ನು ಲೇಖಕಿ ಇಲ್ಲಿ ತೆರೆದಿಡುತ್ತಾರೆ.
ಕವಿ, ಲೇಖಕಿ ದೀಪಾ ಹಿರೇಗುತ್ತಿ ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣದವರು. ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಕನ್ನಡದ ಸಶಕ್ತ ಅಂಕಣಗಾರ್ತಿ ಎಂಬುದನ್ನು “ನಾನು, ನೀವು ಮತ್ತು ...” ಅಂಕಣ ಬರಹಗಳ ಮೂಲಕ ಸಾಬೀತು ಪಡಿಸಿದ್ದಾರೆ. 'ಪರಿಮಳವಿಲ್ಲದ ಹೂಗಳ ಮಧ್ಯೆ' ಅವರ ಚೊಚ್ಚಲ ಕವನ ಸಂಕಲನ. ದಸರಾ ಕವಿಗೋಷ್ಠಿ, ಸಂಕ್ರಮಣ, ಪ್ರಜಾವಾಣಿ ಸಂಚಯ, ತಿಂಗಳು ಕವನಸರ್ಧೆಯಲ್ಲಿ ಬಹುಮಾನ, ಪ್ರಜಾವಾಣಿ - ವಿಮೋಚನಾ ಏರ್ಪಡಿಸಿದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ಲೇಖಕರ ಸಂಘದಿಂದ ಕೊಡಮಾಡುವ ಗುಡಿಬಂಡೆ ಪೂರ್ಣಿಮಾ ದತ್ತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ...
READ MORE