ಖ್ಯಾತ ಅನುವಾದಕ ಡಾ. ಶಿವಾನಂದ ಬೇಕಲ್ ಅವರು ಪಾವ್ಲೋ ಕೊಯೆಲೋ ಅವರು ಮೂಲ ಇಂಗ್ಲಿಷ್ ನಲ್ಲಿ ಬರೆದ ಕೃತಿ ಆಲ್ ಕೆಮಿಸ್ಟ್’ ಕೃತಿಯನ್ನು ಅದೇ ಶೀರ್ಷಿಕೆಯೊಂದಿಗೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಬ್ರೆಜಿಲ್ ಮೂಲದ ರಿಯೋಡಿಜನೈರೋ ನಗರ ನಿವಾಸಿ ಪಾವ್ಲೋ ಕೊಯೆಲೋ ಅವರು 1986ರಲ್ಲಿ ತಮ್ಮ ಜೀವನಾನುಭವಗಳನ್ನು ಆಧರಿಸಿ ಬರೆದ ಕೃತಿಯು ಇವರಿಗೆ ಅಪಾರ ಜನಮನ್ನಣೆ ನೀಡಿತ್ತು. ಸುಮಾರು 180 ಭಾಷೆಗಳಿಗೆ ಅನುವಾದಗೊಂಡಿದ್ದು, ಈವರೆಗೆ 150 ದಶಲಕ್ಷ ಪ್ರತಿಗಳು ಮಾರಾಟವಾಗಿ ದಾಖಲೆ ಸೃಷ್ಟಿಸಿದೆ. ಪೋರ್ಚುಗೀಸ್, ಸ್ಪಾನಿಷ್ ಹಾಗೂ ಆಂಗ್ಲ ಭಾಷೆಗಳ ವಿಶ್ವಪ್ರಸಿದ್ಧ ಸಾಹಿತಿಯೂ ಹೌದು. ವಿಶ್ವವಮಟ್ಟದಲ್ಲಿ ಜನಪ್ರಿಯ ಸಾಹಿತಿಗಳ ಪೈಕಿ ಇವರ ಹೆಸರೂ ಇದೆ.
©2025 Book Brahma Private Limited.