ಯಶಸ್ಸಿನ ಸೂತ್ರಗಳು; ಪಾಲಕರಿಗೆ ಗೊತ್ತಿಲ್ಲ; ಶಿಕ್ಷಕರು ಹೇಳಲ್ಲ- ಈ ಕೃತಿಯು ವ್ಯಕ್ತಿಯೊಬ್ಬನ ದೌರ್ಬಲ್ಯವನ್ನು ವಿಶ್ಲೇಷಿಸುತ್ತದೆ ಮಾತ್ರವಲ್ಲ ಸಮಸ್ಯೆಗಳೊಂದಿಗೆ ಹೋರಾಡುವ ವಿವಿಧ ವರಸೆಗಳನ್ನು ತಿಳಿಸುತ್ತದೆ. ಇದು ವಿದ್ಯಾರ್ಥಿಗಳಿಗಾಗಿ ಮಾತ್ರವಲ್ಲ, ಪಾಲಕರು ಶಿಕ್ಷಕರು ಸಹ ಓದಬೇಕಾದ ಪುಸ್ತಕ. ಅತಿಯಾದ ನಿದ್ದೆ, ಕೋಪ, ಸಿಟ್ಟು, ಕೀಳರಿಮೆ ಇವುಗಳನ್ನು ಮೆಟ್ಟಿ ಓದಿನಲ್ಲಿ ಹೇಗೆ ಏಕಾಗ್ರತೆ ಸಾಧಿಸಿ ಗೆಲುವು ದಕ್ಕಿಸಿಕೊಳ್ಳಬೇಕೆಂಬದರ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿದ್ದಾರೆ ಲೇಖಕ ಯಂಡಮೂರಿ ವೀರೇಂದ್ರನಾಥ.
ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE