ಬದುಕಿನಲ್ಲಿ ನಮಗೆ ಎದುರಾಗುವ ಅನೇಕ ನಕಾರಾತ್ಮಕ ಸಂಗತಿಗಳು ಸನ್ನಿವೇಶಗಳಿಂದ ಕೆಲವು, ಸ್ವಯಂಕೃತದಿಂದ ಮತ್ತೆ ಹಲವು ಉಂಟಾಗುತ್ತವೆ. ಇಂತಹ ಮೈನಸ್ ಅಥವಾ ದೌರ್ಬಲ್ಯ ಅಂಶಗಳನ್ನು ಬದುಕಿನಿಂದ ಅಳಿಸಿ, ಅಲ್ಲಿ ಪ್ಲಸ್ ಅಥವಾ ಶಕ್ತಿಯುತ ಅಂಶಗಳನ್ನು ಬಳಸಿದರೆ ಜಯ ನಿಶ್ಚಯ. ನಮ್ಮಲ್ಲಿ ಅಡಗಿರುವ ಅನೇಕ ನಕಾರಾತ್ಮಕ ಅಂಶಗಳನ್ನು ಹುಡುಕಿ ಹೊರಹಾಕಿದರೆ ಜೀವನದಲ್ಲಿ ಗೆಲುವು ಖಂಡಿತ. ಈ ಹಿನ್ನೆಲೆಯಲ್ಲಿ ಈ ಕೃತಿಯು ನಮ್ಮಲ್ಲೇ ಇರುವ ನಕಾರಾತ್ಮಕ ಹಾಗೂ ಸಕಾರಾತ್ಮಕ ವಿಷಯಗಳನ್ನು ಅರಿವಿಗೆ ತರುತ್ತದೆ.
ಕಥೆಗಾರ,ಲೇಖಕ, ಅನುವಾದಕ, ಕಾದಂಬರಿಗಾರರಾದ ಯತಿರಾಜ್ ವೀರಾಂಬುಧಿ 11-08-1957ರಂದು ಮೈಸೂರಿನಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮೈಸೂರಿನಲ್ಲೇ ಪೂರ್ಣಗೊಳಿಸಿದ ಅವರು ಮೈಸೂರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಬಿ.ಇ (ಎಲೆಕ್ಟ್ರಿಕಲ್ ಪವರ್) ಮುಗಿಸಿದರು. ಬೆಂಗಳೂರು ಮತ್ತು ಸಲ್ತನತ್ ಆಫ್ ಒಮಾನ್‌ನಲ್ಲಿ ಕಾರ್ಯ ನಿರ್ವಹಿಸಿ 2013ರಲ್ಲಿ ನಿವೃತ್ತಿ ಪಡೆದಿದ್ದಾರೆ. ಯತಿರಾಜ್ ವೀರಾಂಬುಧಿಯವರ ಪ್ರಕಟಿತ ಕೃತಿಗಳು- ಆಪತ್ತಿಗೆ ಆಹ್ವಾನ, ಪರಿಶೋಧ, ಗಾಥೆ, ಮರದಡಿ ಮಳೆ, ಪಂಚಾನನ, ಜೀವನ್ಮುಖಿ, ಸಾಬೀತು, ಕುರುಡು ತಿರುವು, ಅವಿನಾಭಾವ, ಹಸ್ತಕ್ಷೇಪ, ಹಾಸುಹೊಕ್ಕು, ಕಪ್ಪು ನದಿ, ಉದ್ಯೋಗ ಪರ್ವ, ಕರೆದರೆ ಬಾರೆ..!, ಒಂದೊಂದಾಗಿ ಜಾರಿದರೆ, ರಣವೀಳ್ಯ, ಚಿರಸ್ಮಿತ, ಸುಖಿಯಾಗಿರು ...
READ MORE