ಪ್ರತಿಯೊಬ್ಬರ ಜೀವನದಲ್ಲಿಯೂ ಮುಖ್ಯವಾದ ಟರ್ನಿಂಗ್ ಪಾಯಿಂಟ್ ಗಳು ಇದ್ದೆ ಇರುತ್ತದೆ. ಈ ಎಲ್ಲಾ ಟರ್ನಿಂಗ್ ಪಾಯಿಂಟ್ ಗಳ ಸಮಯದಲ್ಲಿ ನಮ್ಮೊಳಗಾಗುವ ಆತಂಕ, ತಳಮಳ ಎಲ್ಲವನ್ನು ನೋಡಬೇಕಾದ ಬಗೆ, ಅದರಿಂದ ಹೊರಬರಲು ಧೈರ್ಯ ನೀಡುವಂತಹ ಅಂಶಗಳನ್ನು ಈ ಕೃತಿಯಲ್ಲಿನ ಲೇಖನಗಳನ್ನು ವಿವರಿಸುತ್ತವೆ.
ವ್ಯಕ್ತಿತ್ವ ಎನ್ನುವುದು ಎಷ್ಟು ಜಟಿಲವೋ, ವ್ಯಕ್ತಿತ್ವ ವಿಕಸನ ಎನ್ನುವುದೂ ಅಷ್ಟೇ ಸಂಕೀರ್ಣ. ಅದರ ಸಿಕ್ಕುಗಳನ್ನು ನಾವು ನಾಜೂಕಾಗಿ ಬಿಡಿಸಿದಷ್ಟು ಅದು ಸರಳವಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ ಎನ್ನುವ ಲೇಖಕರು ತಮ್ಮ ಲೇಖನಗಳ ಮೂಲಕ ಸೋಲು, ಗೆಲುವು, ಸಾಧನೆ, ಗುರಿ, ಸಾಮರ್ಥ್ಯ ಮುಂತಾದ ವಿಷಯಗಳ ಕುರಿತು ಸರಳವಾಗಿ ಅರ್ಥೈಸುತ್ತಾ ಹೋಗುತ್ತಾರೆ. ಜಾಬ್ ನ್ಯೂಸ್ ಪತ್ರಿಕೆಯ ಅಂಕಣದಲ್ಲಿ ಪ್ರಕಟವಾಗುತ್ತಿದ್ದ ಲೇಖನಗಳ ಸಂಗ್ರಹವಾಗಿದೆ ಟರ್ನಿಂಗ್ ಪಾಯಿಂಟ್.
ಪತ್ರಕರ್ತ, ಬರಹಗಾರ ಗಿರೀಶ್ ತಾಳಿಕಟ್ಟೆ ಅವರು ಜನಿಸಿದ್ದು 1984 ನವೆಂಬರ್ 13ರಂದು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ತಾಳಿಕಟ್ಟೆ ಕಾವಲು ಇವರ ಹುಟ್ಟೂರು. ಉದ್ಯೋಗ ಸ್ಫೂರ್ತಿ, ಜಾಬ್‌ನ್ಯೂಸ್, ಗೌರಿ ಲಂಕೇಶ್ ವಾರಪತ್ರಿಕೆ ಮೊದಲಾದ ಪತ್ರಿಕೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಇವರು ಪ್ರಸ್ತುತ, ಆರಕ್ಷಕ ಲಹರಿ ಮಾಸಪತ್ರಿಕೆಯ ಸಹ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗಾಗಿ ಹೊರತರುತ್ತಿದ್ದ ಗೈಡ್ ಮಾಸಿಕದ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಹವ್ಯಾಸ ಹಾಗೂ ಆಸಕ್ತಿಯಿಂದ ಇವರು ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಟರ್ನಿಂಗ್ ಪಾಯಿಂಟ್ (ವ್ಯಕ್ತಿ ವಿಕಸನ ಬರಹಗಳು), ಕಾಡುವ ಕತೆಗಳು, ನನ್ನ ಕೈಗಂಟಿದ ನೆತ್ತರು (ಅನುವಾದ), ಜೆನ್ ಕಥೆಗಳು, ...
READ MORE