"ಬದುಕು ಇಷ್ಟೇನಾ? ಇದಕ್ಕೊಂದು ಅರ್ಥವಿದೆಯೇ? ವಯಸ್ಸಿಗೆ ಮೀರಿದ ಇಂತಹ ವೈರಾಗ್ಯದ ಪ್ರಶ್ನೆಗಳನ್ನು ನನಗೆ ನಾನೇ ಹಾಕಿಕೊಂಡು ನಲುಗುತ್ತಿದ್ದ ಸಂದರ್ಭದಲ್ಲಿ "ಮನಸ್ಸೇ ಸ್ವಲ್ಪ ನಿಲ್ಲು" ಈ ಎಲ್ಲಾ ಗೊಂದಲಗಳಿಗೆ ಉತ್ತರವಾಗಿ ಈ ವ್ಯಕ್ತಿತ್ವ ವಿಕಸನ ಕೃತಿಯೂ ಮೂಡಿಬಂದಿದೆ" ಇದು ಸಾಯಿಸುತೆಯವರ ಮಾತು.
ಇದು ಅವರ ಮೊದಲ ಮತ್ತು ಕೊನೆಯ "ವ್ಯಕ್ತಿತ್ವ ವಿಕಸನ" ಪುಸ್ತಕ.ಸದಾ ನಿರೀಕ್ಷೆಯಲ್ಲೇ ತೊಳಲಾಡುವ ಜನರು ಕಳೆದುಕೊಳ್ಳುತ್ತಿರುವ ಪುಟ್ಟ ಪುಟ್ಟ ಸಂತೋಷಗಳ ಕಡೆ ಗಮನ ಕೊಡಲಾರರು, ಕಳೆದುಕೊಂಡದ್ದು ಅರಿವಾಗುವಾಗ ಮತ್ತೆ ಪಡೆಯಲಾರದಷ್ಟು ದೂರಕ್ಕೆ ಕ್ರಮಿಸಿಬಿಟ್ಟಿರುತ್ತಾರೆ.ಈ ಕೃತಿ ಕೂಡ ಇದೇ ರೀತಿ ಮೂಡಿ ಬಂದಿದೆ.ಸಾಯಿಸುತೆಯವರ ಕೃತಿಗಳು ಏಕೆ ಆಪ್ತವಾಗುತ್ತವೆ ಎಂಬ ಪ್ರಶ್ನೆಗೆ ಒಕ್ಕೊರಲಿನ ಅಭಿಪ್ರಾಯವಾಗಿ ಕಾದಂಬರಿಯ ವಸ್ತು ಮತ್ತು ಪಾತ್ರಗಳ ಸಹಜತೆ ಪ್ರತಿಯೊಬ್ಬರ ಅನುಭವಕ್ಕೂ ನಿಲುಕಿರುವ,ನಿಲುಕುವ ಬದುಕಿನಂತೆಯೇ.
©2024 Book Brahma Private Limited.