ಗುರೂಜಿ ಶ್ರೀ ಋಷಿ ಪ್ರಭಾಕರ ಅವರ ವಿಚಾರಗಳನ್ನು ಲೇಖಕ ನೆಲ್ಲೀಕೆರೆ ವಿಜಯಕುಮಾರ್ ಅವರು ಬರಹಕ್ಕಿಳಿಸಿದ ಕೃತಿ-ಅಶಿಸ್ತಿನಿಂದ ಬದುಕಿರಿ. ಶಿಸ್ತುಬದ್ಧ ಜೀವನಕ್ಕೊಂದು ಗುಡ್ ಬೈ ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. ಅಶಿಸ್ತಿನಿಂದ ಬದುಕಿರಿ ಎಂದರೆ ನಿಮಗೆ ತಿಳಿದ ಹಾಗೆ ಬದುಕಿರಿ ಎಂದರ್ಥ. ಬದುಕನ್ನು ಗಂಭೀರವಾಗಿ ಸ್ವೀಕರಿಸಿ ನಾವೇ ಸಮಸ್ಯೆಗಳನ್ನು ಆಹ್ವಾನಿಕೊಂಡು ಒದ್ದಾಡುವುದಕ್ಕಿಂತ ಸರಳವಾಗಿ ಬದುಕನ್ನು ಹೇಗಿದೆಯೋ ಹಾಗೆ ಸ್ವೀಕರಿಸಲು ಕಲಿಯಬೇಕು ಎಂಬರ್ಥದಲ್ಲಿ ಉಪಯೋಗಿಸಲಾಗಿದೆ. ಹತಾಶೆಯ, ನಿರಾಶೆಯ ಬದುಕಿಗೊಂದು ಪ್ರೇರಣಾತ್ಮಕ ನುಡಿ-ಸಲಹೆಗಳಿರುವ ಕೃತಿ ಇದು.
©2025 Book Brahma Private Limited.