ಚಿಂತನ

Author : ಗಿರಿಮನೆ ಶ್ಯಾಮರಾವ್

Pages 112

₹ 110.00




Year of Publication: 2019
Published by: ಗಿರಿಮನೆ ಪ್ರಕಾಶನ
Address: 286/3, ಲಕ್ಷ್ಮಿಪುರಂ ಎಕ್ಸ್‌ಟೆನ್ಷನ್, ಸಕಲೇಶಪುರ -573134

Synopsys

ಬದುಕಿನಲ್ಲಿ ಸರಿ ಯಾವುದು? ತಪ್ಪು ಯಾವುದು? ಹತ್ತಿರದವರ ಅಂತರಂಗದಲ್ಲಿ ಏನೆಲ್ಲ ವಿಷಯ ಹುದುಗಿರುತ್ತದೆ? ಈ ಜಗತ್ತು ಯಾಕೆ ಹೀಗಿದೆ?' ಇತ್ಯಾದಿ ಚಿಂತನೆಗಳ ಪ್ರಶ್ನೆ, ಗೊಂದಲಗಳೇ ನಮ್ಮ ತಲೆಗಳಲ್ಲಿ  ಮಿಡಿಯುತ್ತಿರುತ್ತವೆ. ಈ ಎಲ್ಲಾ ಪ್ರಶ್ನೆಗಳ ವಿಶ್ಲೇಷಣೆಯ ಹಾದಿ ಹಿಡಿದವರಿಗೆ ಉತ್ತರವಾಗಲಿದೆ ಚಿಂತನ ಪುಸ್ತಕ.  ಸರಿ-ತಪ್ಪುಗಳ ವಿಶ್ಲೇಷಣೆ, ಸಾಮಾನ್ಯವಾಗಿ ಜನ ನಡೆದುಕೊಳ್ಳುವ ರೀತಿ, ಆಷಾಢಭೂತಿಗಳ ಸೋಗನ್ನು ಕಳಚಿ ವಿಚಾರಶೀಲರನ್ನಾಗಿಸುವ ಸಂಗತಿಗಳು ಅಡವಾಗಿದೆ ಪುಸ್ತಕದಲ್ಲಿ.

About the Author

ಗಿರಿಮನೆ ಶ್ಯಾಮರಾವ್

ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ...

READ MORE

Related Books