ಹಳ್ಳಿಯ ಬದುಕಿನ ಎದೆಯಿಂದ ಹೊಮ್ಮಿದ ಪದಗಳು ‘ಲಾವಣಿ’ಗಳ ಸಂಕಲನವಿದು. ಡಾ. ಸಿ.ಕೆ. ನಾವಲಗಿ ಕೃತಿಯ ಸಂಪಾದಕರು. ಒಂದು ಕಾಲದಲ್ಲಿ ಸಮಾಜಶಿಕ್ಷಣದ ಒಂದು ಪ್ರಭಾವೀ ಮಾಧ್ಯಮವಾಗಿದ್ದ ಲಾವಣಿ ಪ್ರಕಾರ ಕಾಲಮಾನದ ದಾಳಿಯಲ್ಲಿ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಂತಿದ್ದರೂ ಅದನ್ನು ಜೀವಂತವಾಗಿಟ್ಟಿರುವ ಕಲಾವಿದ ಬೈಲಹೊಂಗಲದ ಸೋಮಲಿಂಗಪ್ಪ ದೊಡವಾಡ. ಅವರ ರಚನೆಯ ಲಾವಣಿಗಳನ್ನು ಸಂಪಾದಿಸಿದ್ದಾರೆ ಸಿ.ಕೆ. ನಾವಲಗಿ. ಈ ಕೃತಿಯಲ್ಲಿ ಪರಮೇಶ್ವರ ಸ್ತೋತ್ರ, ಗಣಪತಿ ಸ್ತೋತ್ರ, ಬಸವೇಶ್ವರ ಸ್ತೋತ್ರ, ಮಾನಕಂಜರ, ತಿರುನೀಲಕಂಠ, ಬೇಡರ ಕಣ್ಣಪ್ಪ, ವೀರಗೊಲ್ಲಾಳನ ಚರಿತ್ರೆ, ಕುಂಬಾರ ಗುಂಡಯ್ಯ, ಬಸವೇಶ್ವರ ಲಾವಣಿ, ಅಕ್ಕಮಹಾದೇವಿ, ಗುಹೇಶ್ವರ, ಸಂತ ತುಕಾರಾಮ, ಭಕ್ತಿಯ ಮೂಲ, ನಮಸ್ಕಾರ, ಶಿವಲೀಲಾ, ಕಿತ್ತೂರು ಚನ್ನಮಾಜಿ, ಕಿತ್ತೂರ ಚೆನ್ನಮ್ಮನ ಚರಿತ್ರೆ, ಕಿತ್ತೂರ ವಿಜಯೋತ್ಸವ, ಕಿತ್ತೂರ ಸ್ವಾತಂತ್ಯ್ರ, ಚನ್ನವ್ವನ ಪದಾ: ಸತ್ತ ಪತಿಯನ್ನು ಬದುಕಿಸದವಳು, ವೀರರಾಣಿ ಬೆಳವಡಿ ಮಲ್ಲಮ್ಮ, ಬೆಳವಡಿ ಗ್ರಾಮ, ವೀರರಾಣಿ ಚೆನ್ನಮ್ಮ, ಬಾರತ ಸ್ವಾತಂತ್ಯ್ರ, ಭಾರತ ಯೋಧರು, ಮಹಾತ್ಮಾ ಗಾಂಧೀಜಿ ಮುಂತಾದ ಲಾವಣಿ ಪದಗಳಿವೆ.
©2024 Book Brahma Private Limited.