ಡಾ. ಚಿ. ಸಿ.ನಿಂಗಣ್ಣ ಅವರ ಕೃತಿ- ‘ಸಂಸ್ಕೃತಿ ಮತ್ತು ಜಾನಪದ’. ಗ್ರಾಮೀಣ ಬದುಕಿನ ಸಾಹಿತ್ಯ ಚಿಂತನೆಯು ತನ್ನದೇ ಆದ ಸತ್ವ, ತತ್ವ,ಮಹತ್ವ ಹೊಂದಿರುವುದನ್ನು ಲೇಖಕರು ಗುರುತಿಸಿದ್ದಾರೆ. ಗ್ರಾಮೀಣ ಮಹಿಳೆಯ ಕೃಷಿಗೆ ಪ್ರೇರಕಶಕ್ತಿ ನಮ್ಮ ಹಳ್ಳಿ. ಅಂದು ಇಂದು ಜನಪದರಲ್ಲಿ ಜೀವನ ಮೌಲ್ಯಗಳು, ಕಲಬುರ್ಗಿ ಜಾನಪದ, ಜಾನಪದ ಕ್ರೀಡೆಗಳು, ಜಾಗತೀಕರಣ ಜನಪದಗಳು ಹೀಗೆ ಬರಹಗಳು ಮನಮುಟ್ಟುತ್ತವೆ. ಚಿಂತನೆಗೆ ಹಚ್ಚುತ್ತವೆ. ಜನಪದ ಸಾಹಿತ್ಯ, ಸಂಗೀತ, ಕ್ರೀಡೆ,ಆರೋಗ್ಯ, ಆಹಾರ, ವಿಚಾರ, ಸಂಪ್ರದಾಯ, ಈ ಎಲ್ಲ ಅಂಶಗಳು ಜಲಮೂಲ, ನೆಲಮೂಲ, ತಳಮೂಲ ಸಂಸ್ಕೃತಿಗೆ ಪೂರಕವಾಗಿವೆ. ಸಂಸ್ಕೃತಿ ಇರುವುದು ಜನಪದರಲ್ಲಿ ಅಲ್ಲ ಅವರ ಬದುಕಿನಲ್ಲಿ ಎಂಬುದು ಬಹುಮುಖ್ಯವಾದದ್ದು. ಬದುಕು ಬದಲಾದರೆ ಸಂಸ್ಕೃತಿಯು ಬದಲಾಗುವ ದುರಂತಕ್ಕೆ ಲೇಖಕರು ವಿಷಾದಿಸಿದ್ದಾರೆ. ಜಾನಪದ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳುವವರಿಗೆ ಈ ಕೃತಿಯು ಆಕರಗ್ರಂಥ ವಾಗಲಿದೆ.
©2024 Book Brahma Private Limited.