ಮೈಸೂರು ಇತಿಹಾಸದ ಹಳೆಯ ಪುಟಗಳು

Author : ತಿರುಮಲೆ ತಾತಾಚಾರ್ಯ ಶರ್ಮ (ತಿ.ತಾ. ಶರ್ಮ)

Pages 187

₹ 25.00




Year of Publication: 2006
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

Synopsys

ಕರ್ನಾಟಕ ಸರ್ಕಾರದ ಸುವರ್ಣ ಸಾಹಿತ್ಯ ಮಾಲೆ ಅಡಿಯಲ್ಲಿ ತಿರುಮಲೆ ತಾತಾಚಾರ್ಯ ಶರ್ಮಾ ಅವರು ರಚಿಸಿದ ಕೃತಿ ‘ಮೈಸೂರು ಇತಿಹಾಸದ ಹಳೆಯ ಪುಟಗಳು’. ಮೈಸೂರು ಸಂಸ್ಥಾನವನ್ನು ಆಳಿದ ರಾಜವಂಶಸ್ಥರು, ಆ ಸಮಯದ ವಿಶೇಷ ಸಂಗತಿಗಳ ಕುರಿತು ಕೃತಿಯು ಬೆಳಕು ಚೆಲ್ಲಿದೆ.

ಈ ಕೃತಿಯು ಮುಖ್ಯವಾಗಿ ಹೈದರ್‌ ಆಂಗ್ಲರಿಗೆ ಬದುಕು-ಸಾವಿನ ಸಂಗ್ರಾಮ ನಡೆಸಹಚ್ಚಿದ, ಭಾರತ ಬಂಧ ವಿಮೋಚಕ ಬಿರುದಿಗೆ ಇವನ್ನೊಬ್ಬನೇ ಭಾಗಿಯಾದ, ಅನಾಮಧೇಯ ಮೈಸೂರಿಗೆ ಅಭಿಮಾನಧನ ಟಿಪ್ಪು ಸುಲ್ತಾನ ಅಂತಾರಾಷ್ಟ್ರೀಯ ಸ್ಥಾನ ಗಳಿಸಿಕೊಟ್ಟ, ಟಿಪ್ಪುವಿನ ಪತನಕ್ಕೆ ವಂಚಕರು ಹೂಡಿದ ಸಂಚು, ಕೃಷ್ಣರಾಜ ಭೂಪ, ಮನೆಯಲ್ಲಿ ದೀಪ, ಹೀಗೆ ಮೈಸೂರನ್ನಾಳಿದ ರಾಜರು, ಮೈಸೂರು ಸಂಸ್ಥಾನದ ಜನರ ಬದುಕನ್ನು ಈ ಕೃತಿಯು ಅನಾವರಣಗೊಳಿಸಿದೆ.

About the Author

ತಿರುಮಲೆ ತಾತಾಚಾರ್ಯ ಶರ್ಮ (ತಿ.ತಾ. ಶರ್ಮ)
(27 April 1897 - 20 October 1973)

ಸಾಹಿತಿ, ಪತ್ರಕರ್ತ ತಿ.ತಾ. ಶರ್ಮ ಎಂತಲೇ ಪರಿಚಿತರಾಗಿರುವ ತಿರುಮಲೆ ತಾತಾಚಾರ್ಯ ಶರ್ಮ ಅವರು ಕನ್ನಡ ಸಾಹಿತ್ಯ ಹಾಗೂ ಪತ್ರಿಕಾರಂಗದಲ್ಲಿ ತನ್ನದೇ ಛಾಪು ಮೂಡಿಸಿದವರು.  ಇವರು 1897 ಏಪ್ರಿಲ್‌ 27ರಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜನಿಸಿದರು. ತಾಯಿ ಜಾನಕಿಯಮ್ಮ, ತಂದೆ ಶ್ರೀನಿವಾಸ ತಾತಾಚಾರ್ಯ. ಹುಟ್ಟೂರು ಚಿಕ್ಕಬಳ್ಳಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಪಡೆದರು. ಸ್ವಾತಂತ್ಯ್ರ ಚಳವಳಿಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಪತ್ರಕರ್ತರಾಗಿ ಉದ್ಯೋಗ ಆರಂಭಿಸಿದರು. ಭಾರತಿ ಕಾವ್ಯನಾಮದ ಮೂಲಕ ಹೆಸರಾಗಿದ್ದ ತಿರುಮಲೆ ರಾಜಮ್ಮ ಅವರು ಇವರ ಬಾಳಸಂಗಾತಿ. ಶಾಸನಗಳಲ್ಲಿ ಕಂಡುಬರುವ ಕನ್ನಡ ಕವಿಗಳು ಶರ್ಮ ಅವರ ಮೊದಲ ಕೃತಿಯಾಗಿದೆ.  ಸಾಹಿತ್ಯ ಕೃಷಿಯಲ್ಲಿಯೂ ...

READ MORE

Related Books