ಲೇಕಕ ಡಾ. ಚಿ.ಸಿ. ನಿಂಗಣ್ಣ ಅವರ ಕೃತಿ-ಜಾನಪದ ದರ್ಪಣ. ಜನಪದ ಸಾಹಿತ್ಯಕ್ಕೆ ಸಂಬಂಧಿಸಿದ ಒಂಬತ್ತು ಪ್ರಮುಖ ಲೇಖನಗಳನ್ನು ಒಳಗೊಂಡಿದೆ. ಜಾನಪದ ಸುಗ್ಗಿ ಹಬ್ಬ ವರ್ಷವಿಡೀ ನಡೆದು ಜನಪದ ಸಂಸ್ಕೃತಿಯನ್ನು ಕಟ್ಟಲು ಹೇಗೆ ನಾಂದಿಯಾಯಿತು. ಕಾಯಕಯೋಗಿ ಪರೋಪಕಾರಿ ರೈತರು, ಜನಪದ ಕಲೆಗಳಲ್ಲಿ ಜನಪದರು ಸಾಮಾಜಿಕ ಮೌಲ್ಯಗಳನ್ನು ಹೇಗೆ ಗಟ್ಟಿಗೊಳಿಸಿದರು. ಆಧುನಿಕತೆಯ ಸಂದರ್ಭದಲ್ಲಿ ಜಾಗತೀಕರಣದ ಹಾವಳಿಯಿಂದ ನಮ್ಮ ರೈತರು ಪಡುವ ಸಂಕಟ ಸಮಸ್ಯೆಗಳು, ನಮ್ಮ ಸರ್ಕಾರಗಳು ಕೃಷಿ ಬಗ್ಗೆ ತೋರಿರುವ ನಿರ್ಲಕ್ಷ ಧೋರಣೆಗಳು ಹೀಗೆ ವಸ್ತು ವೈವಿಧ್ಯತೆಯ ಲೇಖನಗಳಿವೆ. ಗ್ರಾಮೀಣ ಕೃಷಿಕರು ಅನ್ನದಾತರು. ಆದರೆ, ಅವರ ಬದುಕು ಈಗ ದಯನೀಯವಾಗಿದೆ. ಆಧುನಿಕ ಜೀವನಶೈಲಿ ಮತ್ತು ಸರ್ಕಾರಗಳ ಬಂಡವಾಳಶಾಹಿತನಗಳಿಗೆ ಮೋಸ ಹೋಗುತ್ತಿದ್ದಾರೆ. ಇವು ಲೇಖನಗಳ ವಸ್ತುವಾಗಿವೆ.
©2024 Book Brahma Private Limited.