ಆದಿ ಮಾನವನ ಕಾಲದಿಂದಲೂ ಮನುಕುಲದ ಜೊತೆಜೊತೆಗೇ ಸೇರಿಕೊಂಡಿರುವ ದೆವ್ವದ ಕಲ್ಪನೆ ಮೌಖಿಕ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ವಿಶ್ಲೇಷಣೆಯ ಹಂತದಲ್ಲಿ ಮನುಷ್ಯನ ಬುದ್ಧಿಮತ್ತೆಯನ್ನು ಬಹಳವಾಗಿ ಕಾಡಿದೆ. ದೆವ್ವದ ಅಸ್ತಿತ್ವದ ಬಗ್ಗೆ ಖಚಿತವಾದ ನಿಲುವಿಗೆ ಬರಲಾರದಷ್ಟು ಸಮಸ್ಯೆ ಬಿಗಡಾಯಿಸಿದೆ. ಪ್ರಸ್ತುತ ಕೃತಿಯಲ್ಲಿ ಪ್ರಾಚೀನ ಕಾಲದಿಂದ ಪ್ರಚಲಿತವಾಗಿರುವ ದೆವ್ವದ ನಂಬಿಕೆಯನ್ನು ಕುರಿತಂತೆ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಚಾಲ್ತಿಯಲ್ಲಿರುವ ಹಲವು ಅಂಶಗಳನ್ನು ಇಲ್ಲಿನ ಲೇಖನಗಳಲ್ಲಿ ಪರಿಚಯಿಸಲಾಗಿದೆ.
ದೆವ್ವ: ಒಂದು ಜನಪದ ನಂಬಿಕೆ, ದೆವ್ವ-ಪಿಶಾಚಿ, ದೇವರು ದೆವ್ವಗಿವ್ವ: ನಮ್ಮೂರ ಸುತ್ತಮುತ್ತ, ದೆವ್ವಸಂಬಂಧಿ ನಂಬುಗೆಗಳು, ದೆವ್ವ: ಜನರು ಕಂಡಂತೆ, ದೆವ್ವ ಸುತ್ತ ಮುತ್ತಲಿನ ಕತೆಗಳು, ದೆವ್ವ ಜಾನಪದದ ಬಗೆಗೆ, ಚನ್ನಾದೇವಿಯ ದೆವ್ವಗಳು: ಆಧುನಿಕ ಅಭಿವ್ಯಕ್ತಿ, ಮುಸ್ಲಿಂ ಜನಾಂಗದಲ್ಲಿ ದೆವ್ವ (ಸೈತಾನ)ದ ಕಲ್ಪನೆ, ದೆವ್ವ ನಮ್ಮದೆ ಒಂದು ವ್ಯಕ್ತಿತ್ವ, ಕಲೆಯ ಆರಾಧನೆ ಅಥವಾ ಪಿತೃಪೂಜೆ, ದೆವ್ವದ ಪುರಾಣ ಕುರಿತು ಮಾಹಿತಿ ಈ ಕೃತಿಯಲ್ಲಿದೆ. ಈ ಕೃತಿಯನ್ನು ಡಿ. ಲಿಂಗಯ್ಯ ಮತ್ತು ಡಾ. ಚಕ್ಕೆರೆ ಶಿವಶಂಕರ್ ಸಂಪಾದಿಸಿದ್ದಾರೆ.
©2024 Book Brahma Private Limited.