ಹಾಸನ ಜಿಲ್ಲೆಯ ಬೇಲೂರಿನ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ,ಕಲೆ ವಾಸ್ತುಶಿಲ್ಪ , ಸ್ಥಳೀಯ ಚರಿತ್ರೆ ಗೆ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಒಳಗೊಂಡಿರುವ ಈ ಕೃತಿಯನ್ನು ಲೇಖಕಿ ಗಂಗಾಂಬಿಕೆ ಎಸ್ ಅವರು ರಚಿಸಿದ್ದು, ಸ್ಥಳೀಯ ಮಹತ್ವವನ್ನು ಎತ್ತಿ ಹಿಡಿಯಲಾಗಿದೆ.
ಲೇಖಕಿ ಗಂಗಾಂಬಿಕೆ ಎಸ್ ಅವರು ಕನ್ನಡ ಉಪನ್ಯಾಸಕರು ಮತ್ತು ಸಂಶೋಧಕರು. 12-06-1982 ರಂದು ಜನಿಸಿದರು ಗಂಗಾಭಿಕೆ ಗೋವರ್ಧನ ಇವರ ಬರೆಹ ನಾಮ. ತಂದೆ ಶಿವಕುಮಾರ ತಾಯಿ ಲಲಿತಾ. ಮೂಲತಃ ಬೆಂಗಳೂರು ಬಳಿಯ ಕಾಡುಗೊಂಡನಹಳ್ಳಿಯವರು. ಕರ್ನಾಟಕ ಮುಕ್ತ ವಿವಿಯಿಂದ ಸ್ನಾತಕೋತ್ತರ ಪದವೀಧರರು.ಹಂಪಿಯ ವಿ.ವಿ.ಯಿಂದ ಎಂ.ಫಿಲ್ ಪದವಿ (ವಿಷಯ: ಬಿಎಂಶ್ರೀ ಅವರ ಇಂಗ್ಲಿಷ್ ಗೀತೆಗಳು ಒಂದು ತೌಲನಿಕ ಅಧ್ಯಯನ), ಬೆಂಗಳೂರು ವಿವಿಯಿಂದ ಬಿ.ಈಡಿ ಪದವಿ, ಬಿಎಂಶ್ರೀ ಪ್ರತಿಷ್ಠಾನದಿಂದ ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೊಮಾ ಹಾಗೂ ಹಳೆಗನ್ನಡ ಕಾವ್ಯಾಭ್ಯಾಸ ಶಿಬಿರದಲ್ಲಿ ಪ್ರಥಮ ಶ್ರೇಣಿಯೊಂದಿಗೆ ಡಿಪ್ಲೊಮಾ, ಹಂಪಿ ವಿವಿಯಿಂದ ನಡೆಸಲಾಗುವ ಕನ್ನಡ ಶಾಸನ ಶಾಸ್ತ್ರದಲ್ಲಿ ಪ್ರಥಮ ರ್ಯಾಂಕ್. ಸಸದ್ಯ ...
READ MORE