About the Author

ಲೇಖಕಿ ಗಂಗಾಂಬಿಕೆ ಎಸ್ ಅವರು ಕನ್ನಡ ಉಪನ್ಯಾಸಕರು ಮತ್ತು ಸಂಶೋಧಕರು. 12-06-1982 ರಂದು ಜನಿಸಿದರು ಗಂಗಾಭಿಕೆ ಗೋವರ್ಧನ ಇವರ ಬರೆಹ ನಾಮ. ತಂದೆ ಶಿವಕುಮಾರ ತಾಯಿ ಲಲಿತಾ. ಮೂಲತಃ ಬೆಂಗಳೂರು ಬಳಿಯ ಕಾಡುಗೊಂಡನಹಳ್ಳಿಯವರು. 

ಕರ್ನಾಟಕ ಮುಕ್ತ ವಿವಿಯಿಂದ ಸ್ನಾತಕೋತ್ತರ ಪದವೀಧರರು.ಹಂಪಿಯ ವಿ.ವಿ.ಯಿಂದ ಎಂ.ಫಿಲ್ ಪದವಿ (ವಿಷಯ: ಬಿಎಂಶ್ರೀ ಅವರ ಇಂಗ್ಲಿಷ್ ಗೀತೆಗಳು ಒಂದು ತೌಲನಿಕ ಅಧ್ಯಯನ), ಬೆಂಗಳೂರು ವಿವಿಯಿಂದ ಬಿ.ಈಡಿ ಪದವಿ, ಬಿಎಂಶ್ರೀ ಪ್ರತಿಷ್ಠಾನದಿಂದ ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೊಮಾ ಹಾಗೂ ಹಳೆಗನ್ನಡ ಕಾವ್ಯಾಭ್ಯಾಸ ಶಿಬಿರದಲ್ಲಿ ಪ್ರಥಮ ಶ್ರೇಣಿಯೊಂದಿಗೆ ಡಿಪ್ಲೊಮಾ, ಹಂಪಿ ವಿವಿಯಿಂದ ನಡೆಸಲಾಗುವ ಕನ್ನಡ ಶಾಸನ ಶಾಸ್ತ್ರದಲ್ಲಿ ಪ್ರಥಮ ರ್‍ಯಾಂಕ್. ಸಸದ್ಯ ಕಾಡುಗುಡಿಯ ಸರಕಾರಿ ಪ.ಪೂ. ಕಾಲೇಜಿನಲ್ಲಿ ಉಪನ್ಯಾಸಕಿ. 

ಕರ್ನಾಟಕ ಇತಿಹಾಸ ಅಕಾಡೆಮಿಯ ಸದಸ್ಯತ್ವ, ಓದು ಬರಹ ಬಳಗ ಟ್ರಸ್ಟ್ ಸದಸ್ಯತ್ವ ಹೀಗೆ ವಿವಿಧ ಸಂಸ್ಥೇಗಳೊಂದಿಗೆ ಸಕ್ರಿಯವಾಗಿದ್ದು, ಹಸ್ತಪ್ರತಿ, ಕಲೆ. ಚರಿತ್ರೆ, ಇತಿಹಾಶಕ್ಕೆ ಸಂಬಂಧಿಸಿ ಸಂಶಫಧನಾ ಲೇಖನಗಳನ್ನು ಬರೆದಿದ್ದಾರೆ. ಸ್ಥಳೀಯ ಸಾಹಿತ್ಯ ಸಂಸ್ಕೃತಿ ಸಂವರ್ಧನೆ ಮತ್ತು ಹೊಯ್ಸಳ ಮಹಾಮಂಡಳೇಶ್ವರರು-ವಿಷಯವಾಗಿ ತುಮಕೂರು ವಿ.ವಿ.ಗೆ ಸಲ್ಲಿಸಿದ ಇವರ ಮಹಾಪ್ರಬಂಧ. 

ಬೇಲೂರು (ಸಂಶೋಧನಾ ಕೃತಿ), ಅಲಂಬಗಿರಿ (ಇತಿಹಾಸ -ಸ್ಮಾರಕಗಳು) ಇವರ ಕೃತಿಗಳು. ಹಾಗೂ ಕರ್ನಾಟಕ ಜೈನ ಶಾಸನಗಳು ಸಂಪುಟ 1` ರಿಂದ 5 ರವರೆಗೆ (ವಿವಿಧ ಸಂಶೋಧಕರ ಸಂಪಾದಕತ್ವದಲ್ಲಿ) ಮತ್ತು ವಸ್ತ್ರ ಸಂಹಿತೆಗೆ ಏಕೆ ವಿರೋಧಧ ಅಸ್ತ್ರ ಸೇರಿದಂತೆ ಸುಮಾರು 35 ಕ್ಕೂ ಅಧಿಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ> 

ಗಂಗಾಂಬಿಕೆ.ಎಸ್

(12 Jun 1982)