ಆಕಾಶಕ್ಕೆ ಏಣಿ ಹಾಕಿ

Author : ಆರ್. ಶ್ರೀನಾಗೇಶ್

Pages 180

₹ 150.00




Year of Publication: 2015
Published by: ಸಾವಣ್ಣ ಎಂಟರ್ ಪ್ರೈಸಸ್
Address: #57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ ಬೆಂಗಳೂರು-560004
Phone: 9845224979

Synopsys

ಆರ್. ಶ್ರೀನಾಗೇಶ್ ಬರೆದಿರುವ ’ಆಕಾಶಕ್ಕೆ ಏಣಿ ಹಾಕಿ’ ಯುವಕರಿಗೆ ಮಾರ್ಗದರ್ಶನ ಮಾಡುವ ಸ್ವಸಹಾಯ ಪುಸ್ತಕ. ಯುವಜನರು ಸಂದಿಗ್ಧತೆಗೆ ಸಿಲುಕಿದಾಗ ದಿಕ್ಕುತೋಚದೆ ಒದ್ದಾಡುತ್ತಾರೆ. ಅಂತಹ ಸಂದರ್ಭದಲ್ಲಿ ಬೇರೆ ಬೇರೆ ಮಾರ್ಗಗಳನ್ನು ಹಿಡಿಯುತ್ತಾರೆ. ಅದರ ಬದಲು ಅಂತಹ ಸಂದಿಗ್ಧತೆಯಿಂದ ಹೊರಬರುವುದು ಹೇಗೆ ಎಂಬುದನ್ನು ವಿವರಿಸುತ್ತದೆ ಕೃತಿ. 

ಇಂಗ್ಲಿಷ್‌ನಲ್ಲಿ ಅನೇಕ ಸ್ವ ಸಹಾಯ ಪುಸ್ತಕಗಳು ಲಭಿಸುತ್ತವೆ. ಆದರೆ ಅವು ಎಲ್ಲರಿಗೂ ತಲುಪುವುದಿಲ್ಲ. ತಲುಪಿದರೂ ಭಾಷಾಂತರದ ಮೂಲಕವೇ. ಹೀಗಾಗಿ ಈ ನೆಲದ ಯುವಜನರ ಸಮಸ್ಯೆಗಳಿಗೆ ಸ್ಪಂದಿಸುವಂತಿಲ್ಲ. ಅದನ್ನೆಲ್ಲ ಮನಗಂಡು ಆರ್‌. ಶ್ರೀನಾಗೇಶ್‌ ಕನ್ನಡದ ಯುವಜನರ ಜಾಯಮಾನಕ್ಕೆ ಒಗ್ಗುವಂತಹ ಕೃತಿ ರಚಿಸಿದ್ದಾರೆ. ಒಟ್ಟು 60 ಪುಟ್ಟ ಪುಟ್ಟ ಅಧ್ಯಾಯಗಳು ಇದರಲ್ಲಿವೆ. 

About the Author

ಆರ್. ಶ್ರೀನಾಗೇಶ್

ವಿಮಾ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಆರ್‌ ಶ್ರೀನಾಗೇಶ್‌ ಅವರಿಗೆ ಬರವಣಿಗೆ ಹವ್ಯಾಸ. ೧೯೬೯ರಿಂದ ಅವರ ಬರವಣಿಗೆಯ ಸಾಹಸ ಮುಂದುವರಿದಿದೆ. ವಿದ್ಯಾರ್ಥಿಗಳ ಗಣಿತ ಭಯವನ್ನು ಹೋಗಲಾಡಿಸುವ ಉದ್ದೇಶದಿಂದ ಅವರು ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಸಲ್ಲಿಸಿದ ಸೇವೆ ಅನುಪಮವಾದುದು.  ಬೆಂಗಳೂರು ವಿಶ್ವವಿದ್ಯಾಲಯದ ಪದವೀಧರರಾದ ನಾಗೇಶ್‌ ವಿಮೆ ಮತ್ತು ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಡಿಪ್ಲೊಮ ಮತ್ತು ಆಪ್ತ ಸಲಹಾ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1995 ರಿಂದ ನಾಡಿನ ಹಲವೆಡೆ ಮಕ್ಕಳಿಗೆ, ಶಿಕ್ಷಕರಿಗೆ, ಪೋಷಕರಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಹಲವು ಸಂಘ ಸಂಸ್ಥೆಗಳಲ್ಲಿ ಉದ್ಯೋಗಿಗಳಿಗೆ ಸ್ವಯಂ ನಿರ್ವಹಣಾ ...

READ MORE

Related Books