ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ಸಹಯೋಗದೊಂದಿಗೆ 2017ರ ಏಪ್ರಿಲ್ 18-19ರಂದು ನಡೆಸಿದ ಎರಡು ದಿನಗಳ ವಿಚಾರ ಸಂಕಿರಣ ಪ್ರಬಂಧಗಳನ್ನು ಡಾ. ಶಿವಗಂಗಾ ರುಮ್ಮಾ ಮತ್ತು ಡಾ. ವೀರಶೆಟ್ಟಿ ಗಾರಂಪಳ್ಳಿ ಅವರು ಸಂಪಾದಿಸಿದ್ದಾರೆ.
ಈ ಪುಸ್ತಕದಲ್ಲಿ ಆದಿಲ್ ಶಾಹಿ ಕಾಲದ ವಿವಿಧ ಆಯಾಮಗಳನ್ನು ಕುರಿತು ಹೃಷಿಕೇಶ ಬಹದ್ದೂರ ದೇಸಾಯಿ, ರಂಜಾನ ದರ್ಗಾ, ಡಾ. ಸಂಗಮೇಶ ಕಲ್ಯಾಣಿ, ದೇವು ಪತ್ತಾರ, ರಘುಶಂಖ ಭಾತಂಬ್ರಾ, ಬಸವರಾಜ ಕೋಡಗುಂಟಿ, ಬೋಡೆ ರಿಯಾಜ್ ಅಹ್ಮದ್, ಶಿವಗಂಗಾ ರುಮ್ಮಾ, ವೀರಶೆಟ್ಟಿ ಗಾರಂಪಳ್ಳಿ, ಮಲ್ಲಿಕಾರ್ಜುನ ಬಾಗೋಡಿ, ಅಬ್ದುಲ್ ಅಜೀಜ್ ರಾಜಪುತ್, ಅಬ್ದುಲ್ ಮಾಜಿದ್ ಮಣಿಯಾರ್, ಮಹ್ಮದ್ ಇಸ್ಮಾಯಿಲ್, ರೆಹಮಾನ್ ಪಟೇಲ್ ಅವರ ಬರಹಗಳಿವೆ.
ಹಿರಿಯ ಕವಿ ಎಸ್.ಜಿ. ಸಿದ್ಧರಾಮಯ್ಯ ಅವರು ’ಇಂಡಿಯಾದ ಮೊಗಲ್ ಶಾಹಿಯ ಆಡಳಿತದ ವಿದ್ಯಮಾನಗಳು ಇಂದು ವರ್ತಮಾನದ ಪ್ರಜಾಸತ್ತೆಯ ರಾಜಕಾರಣಕ್ಕೆ ತಿರುಚಿದ ಇತಿಹಾಸವಾಗಿ ಆಹಾರವಾಗುತ್ತಿರುವಾಗ ಇದು ಆದಲ್ಲಿ, ಅದರೊಳಗೂ ಬದುಕು ಕಟ್ಟಿದ ಒಂದು ಸ್ರೋತವಿದೆ ಎಂಬುದನ್ನು ಕಾಣಿಸುವ ಪ್ರಯತ್ನವನ್ನು 'ಆದಿಲ್‌ಶಾಹಿಯ ಕಾಲದ ಕರ್ನಾಟಕ ಬಹುಸಂಸ್ಕೃತಿಯ ಅನುಸಂಧಾನ' ಎಂಬ ಕೃತಿ ಯಶಸ್ವಿಯಾಗಿ ತೋರಿಸಿದೆ. ಇದಕ್ಕೆ ಕಾರಣ ಆ ಕಾಲದ ಚರಿತ್ರೆಯಲ್ಲಿ ಸಂಭವಿಸಿರುವ ಆದಿಲ್‌ಶಾಹಿಯ 'ಕಿತಾಬ್ ನವರಸ್' ಕೃತಿ. ಈ ಪುಸ್ತಕವು ಭಾವೈಕ್ಯತೆಯ ಮಾನದ ಪ್ರೀತಿಯ ಪ್ರತೀಕವಾಗಿ ಇಂದಿನ ಕೋಮುವಾದಿ ಹಿಂಸಾರಂಭಸಮತಿಗಳಿಗೆ ಒಂದು ಮಾರುತ್ತರವಾಗಿ ಕಂಗೊಳಿಸುತ್ತಿದೆ, ಬಹುತ್ವ ಭಾರತದ ಬಹುಮಾನ್ಯ ಪ್ರಭುತ್ವ ಪ್ರಜಾಪ್ರಭುತ್ವ ಹೇಗೆ ನಡೆಯಬಹುದು ಹೇಗೆ ನಡೆಯಬೇಕು ಎಂಬುದಕ್ಕೆ ಇದು ಒಂದು ಮಾದರಿಯ ಉದಾಹರಣೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
©2024 Book Brahma Private Limited.