‘ಆದಿಕದಂಬರು ಗಂಗರು ಮತ್ತು ಬಾದಾಮಿ ಚಾಲುಕ್ಯರು’ ಕೃತಿಯು ಅಧ್ಯಯನ ಗ್ರಂಥವಾಗಿದೆ. ಪ್ರಾಚೀನ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯನ್ನು ಒಳಗೊಂಡಿದೆ ಪ್ರಸ್ತುತ ಕೃತಿ. ಕರ್ನಾಟಕದ್ದೇ ಆದ ಮೂಲ ಚರಿತ್ರೆಯನ್ನು ಸಾಂಸ್ಥಿಕವಾಗಿಸುವಲ್ಲಿ ಈ ಮೂರು ರಾಜವಂಶಗಳು ಪ್ರಾರಂಭದ ದೆಸೆಯಲ್ಲಿ ಪಟ್ಟ ಶ್ರಮ ಅಗಣಿತ. ಆದಿಕದಂಬರು ಕನ್ನಡ ನಾಡಿನ ಮೊತ್ತ ಮೊದಲ ರಾಜವಂಶವಾಗಿ ತನ್ನ ಅಸ್ತಿತ್ವವನ್ನು ನಿರ್ಮಿಸುವಲ್ಲಿ ವಹಿಸುವ ಪಾತ್ರ ಕುರಿತು ದಾಖಲೆಗಳು ಹೇಳುತ್ತವೆ. ಗಂಗರು ಸಹ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯನ್ನು ರೂಪಿಸುವಲ್ಲಿ ಅಮೋಘ ಪಾತ್ರ ವಹಿಸುತ್ತಾರೆ. ಇವರ ಕಾಲದ ಕಲೆ, ಸಾಹಿತ್ಯ ಮತ್ತು ವಾಸ್ತುಶಿಲ್ಪ ವಿಶೇಷಯುತವಾದುದು. ಬಾದಾಮಿ ಚಾಲುಕ್ಯರು ರಾಜಕೀಯ, ಆಡಳಿತಾತ್ಮಕ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚರಿತ್ರೆಯನ್ನು ನಿರ್ಮಾಣ ಮಾಡಿದರು. ಪ್ರಸ್ತುತ ಕೃತಿಯಲ್ಲಿ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರು ಈ ಮೂರು ರಾಜವಂಶಗಳ ಚರಿತ್ರೆಯನ್ನು ಸಾಂಸ್ಕೃತಿಕ ದೃಷ್ಟಿಯಿಂದ ಅಧ್ಯಯನ ಮಾಡಿದ್ದಾರೆ.
©2024 Book Brahma Private Limited.