.ಲೇಖಕ ವಿರೂಪಾಕ್ಷಿ ಪೂಜಾರಹಳ್ಳಿ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದಲ್ಲಿ ಪ್ರಾಧ್ಯಾಪಕರು. ಎಂ.ಎ, ಎಂ.ಫಲ್, ಪಿಎಚ್ ಡಿ ಪದವೀಧರರು. ಕರ್ನಾಟಕ ಮಧ್ಯಕಾಲೀನ ಸಾಂಸ್ಕೃತಿಕ ಚರಿತ್ರೆ ವಿಷಯದಲ್ಲಿ ಪರಿಣಿತಿ ಹೊಂದಿದ್ದಾರೆ.
ಕೃತಿಗಳು: ಬಳ್ಳಾರಿ ಜಿಲ್ಲೆಯ ಪಾಳೆಗಾರರು, ವಿಜಯನಗರ ಕಾಲದ ಸಂಸ್ಕೃತಿ, ಮಹರ್ಷಿ ವಾಲ್ಮೀಕಿಯ ಲೋಕದೃಷ್ಟಿ ಮತ್ತು ವಿಚಾರಧಾರೆ, ಬ್ರಿಟಿಷರ ವಿರುದ್ಧ ಬೇಡ ನಾಯಕರ ಹೋರಾಟಗಳು, ಕೃಷ್ಣ ದೇವರಾಯನ ತೀರ್ಥಯಾತ್ರೆಗಳು ಹಾಗೂ ಚಿನ್ನಹಗರಿ ಪರಿಸರದ ಪ್ರಾಚ್ಯಾವಶೇಷಗಳು, ಪೆರಿಯಾರ್ ಮತ್ತು ದ್ರಾವಿಡ ಚಳವಳಿ ಸೇರಿದಂತೆ 200ಕ್ಕೂ ಅಧಿಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.
ಪ್ರಶಸ್ತಿ: ಹರತಿ ವೀರನಾಯಕ ಪ್ರಶಸ್ತಿ (2012), ವಾಲ್ಮೀಕಿ ಪ್ರಶಸ್ತಿ (2004), ಬಳ್ಳಾರಿ ಜಿಲ್ಲಾಡಳಿತದಿಂದ ವಿಶೇಷ ಸಾಧನೆ ಪ್ರಶಸ್ತಿ (2012)