ಶೈಲಜ ಹಿರೇಮಠ, 1969 ರ ಜನೆವರಿ 5 ರಂದು ಜನನ. ಎಂ.ಎ, ಎಂ ಫಿಲ್, ಪಿ ಎಚ್ ಡಿ ಪದವೀಧರರು. ಹಂಪಿಯ ಕನ್ನಡ ವಿ.ವಿ. ಮಹಿಳಾ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು. ಮಹಿಳಾ ಜಾನಪದ ಬಗ್ಗೆ ವಿಶೇಷ ಪರಿಣಿತಿ. ಮಹಿಳಾ ಅಧ್ಯಯನ, ಮಹಿಳಾ ಜಾನಪದ, ಬುಡಕಟ್ಟು ಮಹಿಳಾ ಅಧ್ಯಯನ , ದಲಿತ ಮಹಿಳಾ ಅಧ್ಯಯನ ಇತ್ಯಾದಿ ವಿಷಯಗಳಲ್ಲಿ ವಿಶೇಷ ಪರಿಣತಿ.
ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರು. ದಲಿತ ಅಧ್ಯಯನ ಸ್ನಾತಕೋತ್ತರ ಡಿಪ್ಲೊಮಾ ಮತ್ತು ಡಿಪ್ಲೊಮಾ ಕಾರ್ಯಕ್ರಮ ಅಧ್ಯಯನ ಮಂಡಳಿ ಸದಸ್ಯೆ. ಮಹಿಳಾ ಅಧ್ಯಯನ ಸ್ನಾತಕೋತ್ತರ ಡಿಪ್ಲೊಮಾ ಕಾರ್ಯಕ್ರಮ ಅಧ್ಯಯನ ಮಂಡಳಿ ರಚನೆ ಸದಸ್ಯೆ ಹಾಗೂ ಕಾರ್ಯನಿರತ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಬಗೆಗಿನ ವಿಚಾರಣೆ ಸಮಿತಿ ಸದಸ್ಯೆಯಾಗಿಯೂ ವಿಶೇಷ ಕಾರ್ಯ ನಿರ್ವಹಿಸಿದ್ದಾರೆ.
ಪಾತರದವರು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ-1999) ಮಾತೃಪ್ರಧಾನ ಪರಿಕಲ್ಪನೆ; ಪ್ರಸಾರಾಂಗ, ಕನ್ನಡ ವಿ.ವಿ) ಮಹಿಳಾ ಜನಪದ ಸಾಹಿತ್ಯ: ಸಂಗ್ರಹ ಮತ್ತು ಅಧ್ಯಯನಗಳ ಚರಿತ್ರೆ ಇತ್ಯಾದಿ, ಸ್ತ್ರೀ ಕಥನ; ಭುವನ ಪ್ರಕಾಶನ ಹೊಸಪೇಟೆ, ಮಹಿಳಾ ಕಾರ್ಮಿಕರು (ಹಾಡಿಕೆ ಮಹಿಳೆಯರನ್ನು ಅನುಲಕ್ಷಸಿ ಮೊದಲಾದ ವೈಯುಕ್ತಿಕ ಕೃತಿಗಳೂ ಪ್ರಕಟಗೊಂಡಿದೆ.. ಮಹಿಳಾ ಅಧ್ಯಯನ ಅರ್ಧವಾರ್ಷಿಕ ಪತ್ರಿಕೆ;ಇದು ಇವರ ಸಂಪಾದಿತ ಕೃತಿಗಳು.
ಪಾತರದವರು ಪುಸ್ತಕಕ್ಕೆ . ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,, ಅತ್ತಿಮಬ್ಬೆ ಪ್ರಶಸ್ತಿ ಕ. ಗೊರೂರು ಸಾಹಿತ್ಯ ಪ್ರಶಸ್ತಿಗಳು ದೊರಕಿವೆ.
ಸ್ತ್ರೀ ಕಥನ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ದತ್ತಿ ಪ್ರಶಸ್ತಿ, , ಗುಲಬರ್ಗಾ ವಿ.ವಿ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಬಿ.ಎಂ.ಶ್ರೀ ಪ್ರತಿಷ್ಠಾನದ ಸಾವಿತ್ರಮ್ಮ ದತ್ತಿನಿಧಿ ಸಾಹಿತ್ಯ ಪ್ರಶಸ್ತಿ ಸಿಕ್ಕಿವೆ
ಲಿಂಗ ಸಂಬಂಧಿ ಅಧ್ಯಯನ ಕೃತಿಗೆ , ಕರ್ನಾಟಕ ಲೇಖಕಿಯರ ಸಂಘದ ದತ್ತಿ ಪ್ರಶಸ್ತಿ, ಬೆಂಗಳೂರು, ಎಂ.ಕೆ ಇಂದಿರಾ ಪುಸ್ತಕ ಪ್ರಶಸ್ತಿ, ಕರ್ನಾಟಕ ಸಂಘ, ಶಿವಮೊಗ್ಗ, ರತ್ಮಮ್ಮ ಹೆಗ್ಗಡೆ ದತ್ತಿ ಪ್ರಶಸ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ, ಬೆಂಗಳೂರು ಪ್ರಶಸ್ತಿಗಳು ಬಂದಿದೆ.