ಡಾ. ಕೆ. ಎಂ ಮೇತ್ರಿ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಸಮಾಜಶಾಸ್ತ್ರ, ಮಾನವಶಾಶ್ತ್ರ, ಶಿಕ್ಷಣಶಾಸ್ತ್ರ, ಬುಡಕಟ್ಟು ಅಧ್ಯಯನ ಅವರ ಆಸಕ್ತಿಯ ಅಧ್ಯಯನ ಕ್ಷೇತ್ರಗಳು. ಕರ್ನಾಟಕ ಅಲೆಮಾರಿ ಸಮುದಾಯಗಳ 22 ಕೃತಿಗಳು, ಬುಡಕಟ್ಟು ಕುಲ ಕಸುಬುಗಳು, ಕೃಷ್ಣಗೊಲ್ಲರ್ ಕಥನಕಾವ್ಯಗಳು, ಕುಮಾರರಾಮ ಮತ್ತು ಕೃಷ್ಣಗೊಲ್ಲರ ಮಹಾಕಾವ್ಯ ಪ್ರಮುಖ ಪುಸ್ತಕಗಳು ಪ್ರಕಟನೆಯಾಗಿವೆ.
ಸಾಹಿತ್ಯ ಔರ್ ಮಿಥಕೋಮೆ ಆದಿವಾಸಿ : ದಕ್ಷಿಣ ರಾಜ್ಯೋಕೆ ಸಂದರ್ಭ ಮೆ ಬುಡಕಟ್ಟು ಅಭಿವೃದ್ದಿ : ಸುವರ್ಣ ಕರ್ನಾಟಕ ಅಭಿವೃದ್ಧಿ ಪಥ ಪ್ರಮುಖ ಸಂಶೋಧನೆ ಲೇಖನಗಳಾಗಿವೆ. ಶ್ರೇಷ್ಠ ಶಿಕ್ಷಣ ತಜ್ಞ ಡಾ. ಎಚ್. ನರಸಿಂಹಯ್ಯ ಪ್ರಶಸ್ತಿ, ಅಲೆಮಾರಿ ಸಿರಿ 2009- ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಅಲೆಮಾರಿ ಸಮುದಾಯಗಳ ಒಕ್ಕೂಟ, ಪ್ರತಿಭಾ ಪುರಸ್ಕಾರ ಪಡೆದುಕೊಂಡಿದ್ದಾರೆ.