‘ವಿಜಯನಗರ ಕಾಲದ ಸೈನ್ಯವ್ಯವಸ್ಥೆ ಮತ್ತು ಯುದ್ಧನೀತಿ’ ಡಾ.ಎಸ್.ವೈ.ಸೋಮಶೇಖರ್ ಅವರ ಕೃತಿ.ಕದಂಬ, ಚಾಲುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಸೇವುಣ, ಹೊಯ್ಸಳ ಈ ಇತಿಹಾಸ ಕ್ರಮದಲ್ಲಿ ವಿಜಯನಗರವೇ ಕರ್ನಾಟಕದ ಕೊನೆಯ ಸಾಮ್ರಾಜ್ಯವಾಗಿದೆ. ದೀಪ ಆರುವ ಮೊದಲು ದೊಡ್ಡದಾಗುವಂತೆ ಕೊನೆಯ ಸಾಮ್ರಾಜ್ಯವಾಗಿರುವ ವಿಜಯನಗರ ದೊಡ್ಡದಾಗಿ ಬೆಳೆದು, ದೊಡ್ಡರೀತಿಯಲ್ಲಿ ನಾಶವಾಗಿ, ಕನ್ನಡಿಗರಲ್ಲಿ ಮರೆಯದ, ಕಾಡುವ ದೊಡ್ಡ ನೆನಪಾಗಿ ಉಳಿದಿದೆ.
ಈ ನೆನಪನ್ನು ಮರು ನಿರ್ಮಾಣ ಮಾಡುವಲ್ಲಿ ನೆರವಾಗುವುದು ಅಂದಿನ ಆಕರ ಸಾಮಗ್ರಿ. ವಿಜಯನಗರ ಸೈನ್ಯ ಮತ್ತು ಯುದ್ಧಗಳನ್ನು ಕೇಂದ್ರವಾಗಿಟ್ಟು ಕೊಂಡಿರುವ ಇದು ಕೇವಲ ಇವುಗಳ ಸ್ವರೂಪವನ್ನು ವಿವರಿಸಿ ವಿರಮಿಸದೆ, ಇವುಗಳ ಹಿಂದಿನ ಕಾರಣ ಮುಂದಿನ ಪರಿಣಾಮಗಳನ್ನೂ ಗಮನಿಸಿರುವುದರಿಂದ ಕಾರಣ-ಕಾರ್ಯ- ಪರಿಣಾಮಗಳೆಂಬ ಏಕಸೂತ್ರತೆ ಈ ಗ್ರಂಥದಲ್ಲಿ ಅಚ್ಚುಕಟ್ಟಾಗಿ ಅನಾವರಣಗೊಂಡಿದೆ. ಪುಸ್ತಕ -ಲೇಖನ ರೂಪದ ಕೇಂದ್ರೀಯ ಆಕರದೊಂದಿಗೆ ಕೋಟೆ-ವೀರಗಲ್ಲುಗಳಂಥ ಕ್ಷೇತ್ರೀಯ ಆಕರವನ್ನು ಸಂಗ್ರಹಿಸಿರುವುದು ಈ ಕೃತಿಯ ಮತ್ತೊಂದು ವಿಶೇಷತೆ.
©2024 Book Brahma Private Limited.