ಇತಿಹಾಸ, ಪುರಾತತ್ವ ಶಾಸ್ತ್ರ, ಕಲೆ ಮತ್ತು ವಾಸ್ತು ಶಿಲ್ಪ ಮುಂತಾದ ವಿಷಯಗಳಲ್ಲಿ ಅಪಾರ ಜ್ಞಾನವನ್ನು ಹೊಂದಿದ ಡಾ.ಎಸ್ ವೈ ಸೋಮಶೇಖರ್ ಅವರು 1970ರ ಜೂನ್ 28ರಂದು ಜನಿಸಿದರು.ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ,ಮೈಸೂರು ವಿಶ್ವವಿದ್ಯಾಲಯದಲ್ಲಿ (1991-93) ಎಂ,ಎ ಪದವಿಯನ್ನ, ಹಂಪೆಯ ಬಜಾರುಗಳು ಎಂಬ ವಿಷಯದ ಮೇಲೆ ಹಂಪಿ ಕನ್ನಡ ವಿಶ್ವವಿದ್ಯಾಲಯಲ್ಲಿ ಎಂ.ಫಿಲ್ ಪದವಿಯನ್ನು (1993-94), ವಿಜಯನಗರ ಸಾಮ್ರಾಜ್ಯದ ಸೈನ್ಯ ವ್ಯವಸ್ಥೆ ಮತ್ತು ಯುದ್ಧ ನೀತಿ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿಯನ್ನು (2000), ಭಾರತದ ಸಾಹಿತ್ಯ ಎಂಬ ವಿಷಯದಲ್ಲಿ , ಮೈಸೂರು ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಡಿಪ್ಲೋಮ ಪಡೆದ ಅವರು ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.ಇತಿಹಾಸ, ಪುರಾತತ್ವ ಶಾಸ್ತ್ರ, ಕಲೆ ಮತ್ತು ವಾಸ್ತು ಶಿಲ್ಪ , ಸ್ಥಳನಾಮ ಮತ್ತು ಐತಿಹ್ಯಗಳು ಇತ್ಯಾದಿ ವಿಷಯಗಳು ಡಾ.ಎಸ್ ವೈ ಸೋಮಶೇಖರ್ ಅವರ ಆಸಕ್ತಿಯ ಅಧ್ಯಯನ ಕ್ಷೇತ್ರಗಳಾಗಿವೆ.ಹಂಪೆಯ ಬಜಾರುಗಳು,ಕರ್ನಾಟಕ ದೇವಾಲಯ ಕೋಶ, ಜಟಂಗಿ ರಾಮೇಶ್ವರ,ಸ್ಥಳೀಯ ಜಾತ್ರೆ ಪುರಾತತ್ವ ಮಾಲೆ..ಕರ್ನಾಟಕ ಬಿರುದಾಳಿಗಳು ಮೊದಲಾದ ಪ್ರಮುಖ ಕೃತಿಗಳು ಪ್ರಕಟಗೊಂಡಿದೆ.
ವಿಜಯನಗರ ರಚನೆ, ವಿಜಯ ನಗರ ಕಾಲದಲ್ಲಿ ಯುದ್ಧಪ್ರೇರಣೆ, ವಿಜಯ ನಗರ ಕಾಲದ ದಂಡ ನಾಯಕರು, ಕರ್ನಾಟಕದಲ್ಲಿ ಪ್ರಾಚೀನ ಬೀರಪ್ಪ ದೇವಾಲಯಗಳು ಮೊದಲಾದ ಪ್ರಮುಖ ಲೇಖನಗಳು ಪ್ರಕಟವಾಗಿವೆ. ಕುವೆಂಪು ವಿಶ್ವವಿದ್ಯಾಲಯ ಆಯೋಜಿಸಿದ ಕರ್ನಾಟಕ ಇತಿಹಾಸ ಕಾಂಗ್ರೇಸ್ ಅಧಿವೇಶನ, ಉಸ್ಮಾನಿಯ ವಿಶ್ವವಿದ್ಯಾಲಯ ಆಯೋಜಿಸಿದ ವಿಜಯನಗರ ಸಾಮ್ರಾಜ್ಯ ಎಂಬ ವಿಚಾರಸಂಕಿರಣದಲ್ಲಿ ಭಾಗವಹಿಸಿದ್ದಾರೆ.ಉಡುಪಿಯಲ್ಲಿ ನಡೆದ 18ನೇ ಕರ್ನಾಟಕ ಇತಿಹಾಸ ಅಕಾಡೆಮಿ ಸಮ್ಮೇಳನ , ದ್ವಿತೀಯ ಚಿತ್ರದುರ್ಗ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮೊದಲಾದ ಕಡೆಗಳಲ್ಲಿ ಮನ್ನಣೆಗೆ ಪಾತ್ರರಾಗಿದ್ದಾರೆ.