ವ್ಯಕ್ತಿತ್ವ ವಿಕಸನ ಕುರಿತು ಹಲವು ಕೃತಿಗಳನ್ನು ಬರೆದಿರುವ ಲೇಖಕ ಡಿ.ಶಿವಕುಮಾರ ಅವರ ಕೃತಿ-ಯು ಟರ್ನ್. ಯಶಸ್ಸಿನಗೊಂದು ಮಹತ್ವದ ತಿರುವು ಎಂಬುದು ಕೃತಿಯ ಉಪಶೀರ್ಷಿಕೆ. ಬದುಕಿನಲ್ಲಿ ಯಶಸ್ಸು ದೈವದ ಫಲವಲ್ಲ. ಅದು ಪ್ರಯತ್ನದ ಫಲ. ಪ್ರಯತ್ನ ಮಾಡಬೇಕಾದರೂ ಅದಕ್ಕೆ ದೂರದೃಷ್ಟಿಯ ಯೋಜನೆ-ಯೋಚನೆಗಳು ಅಗತ್ಯ. ಹೀಗಿದ್ದಲ್ಲಿ ಮಾತ್ರ ಆ ಪ್ರಯತ್ನಕ್ಕೆ ಬೆಲೆ ಇದ್ದು, ಯಶಸ್ಸಿನತ್ತ ಹೆಜ್ಜೆ ಹಾಕಲು ಸಾಧ್ಯವಾಗುತ್ತದೆ. ಈ ನಡೆ ಇರದಿದ್ದರೆ, ಯಶಸ್ಸಿನ ಗುರಿಯೇ ಬೇರೆ ಹಾದಿಯಲ್ಲಿದ್ದು, ನಮ್ಮ ಪ್ರಯತ್ನದ ಹಾದಿಗಳು ಬೇರೆಯಾಗಿ, ಬದುಕಿನಲ್ಲಿ ಅಂತಿಮವಾಗಿ ಹತಾಶೆ, ನಿರಾಸೆಗಳು ಮನೆ ಮಾಡಿ ವ್ಯಕ್ತಿ ಆತ್ಮಹತ್ಯೆಗೂ ವಿಚಾರ ಮಾಡಬಹುದು. ಇಂತಹ ಅನಾಹುತಗಳಿಂದ ವ್ಯಕ್ತಿಯನ್ನು ತಪ್ಪಿಸಲು ಸೂಕ್ತ ಹಾಗೂ ಸಮಂಜಸ ಕ್ರಮಗಳ ಕುರಿತು, ಸಲಹೆ-ಸೂಚನೆ-ಮಾರ್ಗದರ್ಶಕಗಳ ಕುರಿತಂತೆ ಮಹತ್ವದ ಅಂಶಗಳನ್ನು ಒಳಗೊಂಡ ಕೃತಿ ಇದು.
ಸಾಹಿತಿ ದೊಡ್ಡರಂಗೇಗೌಡ ಅವರು ಕೃತಿಗೆ ಬೆನ್ನುಡಿ ಬರೆದು ‘ಜೀವನದಲ್ಲಿ ಸಕಾರಾತ್ಮಕ ಮನೋಭಾವವನ್ನು ಹೇಗೆ ಬೆಳೆಸಿಕೊಳ್ಳಬೇಕು. ಪ್ರಶ್ನಿಸುವ ಮನೋಭಾವವನ್ನು ಹೇಗೆ ರೂಢಿಸಿಕೊಳ್ಳಬೇಕು ಎಂಬುದರ ಬಗ್ಗೆ ಮತ್ತು ವ್ಯಕ್ತಿತ್ವ ವಿಕಸನ ಕುರಿತಂತೆ ಸೂಕ್ತ ವಿವರಣೆಗಳನ್ನು ಒಳಗೊಂಡಿದೆ. ಮಾತು ಮಥಿಸಿ ಬಂದ ಹಾಗೆ ಇಲ್ಲಿಯ ವಿಷಯ ವಸ್ತುಗಳ ಮಂಥನವಿದೆ’ ಎಂದಿದ್ದಾರೆ.
©2024 Book Brahma Private Limited.