ತುಳು ಜಾನಪದ ಮತ್ತು ಸಂಸ್ಕೃತಿಯ ಹಿರಿಯ ಸಂಶೋಧಕ ಅಮೃತ ಸೋಮೇಶ್ವರ ಅವರು ಜಾನಪದ, ಯಕ್ಷಗಾನ ಮತ್ತು ಸಾಹಿತ್ಯದ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆಗಳನ್ನು ಕೊಟ್ಟವರು. ತುಳುಜಾನಪದ ಅಧ್ಯಯನಕ್ಕೆ ಸಂಬಂಧಿಸಿದಂತೆ ಕಳೆದ 50 ವರ್ಷಗಳಿಂದ ಅಧ್ಯಯನ ನಡೆಸುತ್ತ ಬಂದಿದ್ದು, ಬತ್ತಲಾರದ ಗಂಗೆ, ತುಳುವ ಜಾನಪದ : ಕೆಲವು ನೋಟಗಳು ಅಧ್ಯಯನ ಮತ್ತು ಚಿಂತನೆಗಳ ಫಲವಾದ 25 ಸಂಪ್ರಬಂಧಗಳು ಇಲ್ಲಿ ಒಟ್ಟು ಸೇರಿವೆ.
ಮೌಖಿಕ ಸಾಹಿತ್ಯ, ಜನಪದ ರಂಗಭೂಮಿ, ಪ್ರದರ್ಶನಾತಕ ಕಲೆಗಳು ಮತ್ತು ಸಾಮಾಜಿಕ ಪ್ರಸ್ತುತತೆಗಳನ್ನು ಲೇಖಕರು ಇಲ್ಲಿ ವಿವರವಾಗಿ ಚರ್ಚಿಸಿದ್ದಾರೆ. ಕರ್ನಾಟಕ ಅಂತರ್ಗತವಾದ ತುಳುನಾಡಿನ ಸಾಂಸ್ಕೃತಿಕ ಚಹರೆಯ ಭಿನ್ನ ರೂಪಗಳನ್ನು ಮತ್ತು ಬದಲಾವಣೆಗಳನ್ನು ವಿಮರ್ಶಕರಾಗಿ ವಿವೇಚಿಸಿದ್ದಾರೆ.
©2025 Book Brahma Private Limited.