ಲೇಖಕ ಅಡ್ಡಂಡ ಕಾರ್ಯಪ್ಪ ಅವರ ಕೃತಿ-ಟಿಪ್ಪು ಮತ್ತು ಕೊಡವರು. ಬಚ್ಚಿಟ್ಟ ಸತ್ಯವನ್ನು ಬಿಚ್ಚಿಟ್ಟಾಗ ಎಂಬ ಉಪಶೀರ್ಷಿಕೆಯಡಿ ಇತಿಹಾಸದ ಅಂಶಗಳನ್ನು ಚರ್ಚಿಸಲಾಗಿದೆ. ಮೈಸೂರಿನ ಅರಸ ಟಿಪ್ಪು ಸುಲ್ತಾನನು ಈಗಿರುವ ಇತಿಹಾಸದ ಅಂಶಗಳಂತೆ ಇರಲಿಲ್ಲ. ಆತನೊಬ್ಬ ದೇಶದ್ರೋಹಿ ಆಗಿದ್ದ. ಮತಾಂತರವನ್ನು ಪ್ರಚೋದಿಸುತ್ತಿದ್ದು, ಮುಸ್ಲಿಂ ಹೊರತುಪಡಿಸಿ, ಅನ್ಯ ಧರ್ಮೀಯರನ್ನು ಪೀಡಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳಲು ಒತ್ತಾಯಿಸುತ್ತಿದ್ದ. ಕೊಡವರ ಬಗ್ಗೆ ಆತನಿಗೆ ಅಸೂಹೆ ಇತ್ತು. ಕೊಡವರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡಿದ್ದ, ಹೆಣ್ಣುಮಕ್ಕಳನ್ನು ಅಗೌರವದಿಂದ ಕಂಡಿದ್ದಾನೆ. ಎಂಬ ಅಂಶಗಳನ್ನು ಈ ಕೃತಿ ಒಳಗೊಂಡಿದೆ. ಹೈದರಾಲಿಯು ಸಹ ಕ್ರೌರ್ಯದ ಮತ್ತೊಂದು ಮುಖ ಎಂದೇ ಪುರಾವೆಗಳ ಸಮೇತ ಸಾಬೀತು ಮಾಡಲು ಹೆಣಗುವುದು ಈ ಕೃತಿಯ ಪ್ರಯತ್ನವಾಗಿದೆ. ಕೃತಿಗೆ ಮುನ್ನುಡಿ ಬರೆದ ಖ್ಯಾತ ಸಂಶೋಧಕ ಡಾ. ಎಂ. ಚಿದನಂದ ಮೂರ್ತಿ `ಒಂದು ಅಮೋಘ, ನಿರ್ಬಿಡೆಯ ದಿಟ್ಟ ಕೃತಿ’ ಎಂದು ಬಣ್ಣಿಸಿದ್ದಾರೆ.
©2024 Book Brahma Private Limited.