ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ಗುಹಾಲಯ

Author : ಪಿ.ವಿ.ಕೃಷ್ಣಮೂರ್ತಿ

Pages 60

₹ 130.00




Year of Publication: 2022
Published by: ಚಂದನ ಪ್ರಕಾಶನ
Address: # 784, 10ನೇ ಮುಖ್ಯ, 2ನೇ ಬ್ಲಾಕ್, 1ನೇ ಹಂತ, ಬಿಎಸ್ ಕೆ 1ನೇ ಹಂತ, ಬೆಂಗಳೂರು-560 050
Phone: 9449994930

Synopsys

‘ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ’ ಎಂಬುದು ಡಾ. ಪಿ.ವಿ. ಕೃಷ್ಣಮೂರ್ತಿ ಅವರ ಸಂಪಾದಕತ್ವದ ಕೃತಿ. ತಾಲೂರು ಕೆ. ವೆಂಕಟೇಶ ಗೌರವ ಸಂಪಾದಕರು. 2017-18 ರಲ್ಲಿ ಈ ದೇವಾಲಯ ಕುರಿತು ಬೆಂಗೂರಿನಲ್ಲೇ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ವಿವಿಧ ಲೇಖಕರು ಮಂಡಿಸಿದ ಸಂಶೋಧನಾತ್ಮಕ ಬರಹಗಳನ್ನು ಕೃತಿಯಲ್ಲಿ ಬಳಸಿಕೊಳ್ಳಲಾಗಿದೆ.  ಶ್ರೀ ಗವಿಗಂಗಾಧರೇಶ್ವರ ಸ್ವಾಮಿ: ಸಾಂಸ್ಕೃತಿಕ ಪರಂಪರೆ ಹಾಗೂ ಸಾಹಿತ್ಯಕ ಅಂಶಗಳು, ವಾಸ್ತು ವಿಶ್ಲೇಷಣೆ, ಖಗೋಳ ವೈಜ್ಞಾನಿಕ ಮಹತ್ವ, ಪುರಾತತ್ವೀಯ ಆಧ್ಯಯನ ಹಾಗೂ ಪ್ರಾಗೈತಿಹಾಸಿಕ ಅಂಶಗಳು ಹೀಗೆ ವಿವಿಧ ಅಧ್ಯಾಯಗಳಡಿ ಇತಿಹಾಸದ ಪರಿಚಯವಿದೆ. ಅತ್ಯತ್ತಮವಾದ ವರ್ಣ ಚಿತ್ರಗಳು ಇವೆ. ದೇವಾಲಯದ ಪುರಾತತ್ವೀಯ, ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯನ್ನು ಈ ಕೃತಿ ನೀಡುತ್ತದೆ.  

About the Author

ಪಿ.ವಿ.ಕೃಷ್ಣಮೂರ್ತಿ
(05 January 1951)

ಲೇಖಕ ಪಿ.ವಿ. ಕೃಷ್ಣಮೂರ್ತಿ ಅವರು ಮೂಲತಃ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸಮಂದೂರು  ಗ್ರಾಮದವರು. (ಜನನ 05-01-1951) ತಂದೆ ಜಿ.ಎನ್. ಪಿಳ್ಳಪ್ಪ, ತಾಯಿ ಪಾಪಮ್ಮ. ಸಮಂದೂರು ಹಾಗೂ ಅತ್ತಿಬೆಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದು, ಮೈಸೂರು ವಿ.ವಿ.ಯಿಂದ ಬಿಎ ಹಾಗೂ ಎಂ.ಎ. ಪದವೀಧರರು. ‘ಬಾಣರಸರ ಶಾಸನಗಳು : ಒಂದು ಅಧ್ಯಯನ’ ವಿಷಯವಾಗಿ ಕನ್ನಡ ವಿ.ವಿ. ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಬೆಂಗಳೂರಿನ ಎನ್.ಜಿ.ಇ.ಎ‍.ಫ್. ನಲ್ಲಿ ತಾಂತ್ರಿಕ ತರಬೇತಿ ಹಾಗೂ ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿಕ್ ನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಡಿಪ್ಲೋಮಾ ಪಡೆದರು. ಎಚ್.ಎ.ಎಲ್.ನ ವೈಮಾಂತರಿಕ್ಷ ವಿಭಾಗದಲ್ಲಿ ಎಂಜಿನಿಯರರಾಗಿ ಸೇವೆ ಸಲ್ಲಿಸಿ, ಈಗ ...

READ MORE

Related Books