ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕುಮ್ಮಟದುರ್ಗದ ಅರಸರ ಪಾತ್ರ ಪ್ರಮುಖವಾದದ್ದು. ಶೌರ್ಯ ಸಾಹಸಗಳಿಗೆ ಕುಮ್ಮಟದುರ್ಗದ ಅರಸರಾದ ಮುಮ್ಮಡಿ ಸಿಂಗೆಯನಾಯಕ, ಕಂಪಿಲದೇವ ಹಾಗೂ ರಾಮನಾಥರು ಪ್ರಸಿದ್ಧರು. ಈ ಕುರಿತು ಸಾಂಗತ್ಯ ಕೃತಿಗಳು, ಸ್ಮಾರಕಗಳು ರಚಿತವಾಗಿವೆ. ಶಾಸನಗಳು ಬಿಡಿಬಿಡಿಯಾಗಿ ಪ್ರಕಟಗೊಂಡಿವೆ. ಆದರೆ, ಆಧ್ಯಯನದ ದೃಷ್ಟಿಯಿಂದ ಆ ಎಲ್ಲ ಶಾಸನಗಳ ಪ್ರಸ್ತಾವನೆ ಹಾಗೂ ಪಠ್ಯವನ್ನು ಒಂದೆಡೆಗೆ ತರುವ ಪ್ರಯತ್ನವೇ ’ಶಾಸನಗಳಲ್ಲಿ ಕುಮ್ಮಟದುರ್ಗದ ಅರಸರು’ ಕೃತಿ.
©2024 Book Brahma Private Limited.