47 ಲೇಖನಗಳನ್ನು ಒಳಗೊಂಡಿರುವ ಪ್ರಸ್ತುತ ಗ್ರಂಥ ಹಲಗಲಿ ಬಂಡಾಯವನ್ನು ಕುರಿತಂತೆ ಹಾಗೂ ಬಾಗಲಕೋಟೆಯ ಪರಿಸರದ ವಾಲ್ಮೀಕಿ ಸಮುದಾಯದ ಸ್ಥಿತಿಗತಿ, ಆಚರಣೆ, ಸಂಸ್ಕೃತಿಗಳನ್ನು, ಕುರಿತಂತೆ ವಿವರವಾಗಿ ತಿಳಿಸಿಕೊಡುತ್ತದೆ. ಬೇಡ ಸಮುದಾಯದ ಪ್ರತೀಕವಾಗಿ ಸಿಂಧೂರ ಲಕ್ಷ್ಮಣನನ್ನು ಕುರಿತ ಸಾಹಿತ್ಯ ಮೂಲ ಮತ್ತು ಮೌಖಿಕ ಪರಂಪರೆಯಿಂದ ಬಂದಿರುವ ಹಾಗೂ ಜಾನಪದ ಆಕರಗಳ ಮುಖಾಂತರ ಅವನ ವ್ಯಕ್ತಿತ್ವವನ್ನು ಕಟ್ಟಿಕೊಡುವ ನೆಲೆಯಲ್ಲಿ ಸಂಘಟಿಸಿದ್ದ ವಿಚಾರಸಂಕಿರಣ ಒಂದರಲ್ಲಿ ಮಂಡಿಸಿದ ಲೇಖನಗಳು ಇಲ್ಲಿವೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ: ಸಾಂಸ್ಕೃತಿಕ ಅನನ್ಯತ ಮತ್ತು ಹಲಗಲಿ ಬಂಡಾಯ ೨. ಬಾಗಲಕೋಟೆ ಪರಿಸರದ ವಾಲ್ಮೀಕಿ ಸಮುದಾಯದ ಸ್ಥಿತಿಗತಿಗಳು , ಆಚರಣಾತ್ಮಕ ನೆಲೆಗಳು , ಆಧುನಿಕ ಜಗತ್ತು ಹಾಗೂ ತಳಸಮುದಾಯಗಳು ,ಸಿಂಧೂರ ಲಕ್ಷ್ಮಣ ಹಾಗೂ ಸಂಘರ್ಷದ ಸಂಕಥನ ಬೇಡ ಸಮುದಾಯದ ಅನನ್ಯತೆ ಹೋರಾಟ ಹಾಗೂ ಪ್ರಸ್ತುತ ಸುದರ್ಭದಲ್ಲಿ ತಳಸಮುದಾಯ `ಗಳ ಸ್ಥಿತಿಗತಿಗಳನ್ನು ಇಲ್ಲಿ ಅಧ್ಯಯನಕ್ಕೆ ಒಳಪಡಿಸಲಾಗಿದೆ.
©2024 Book Brahma Private Limited.