ಸಂಬಂಧಗಳತ್ತ ಒಂದು ಚಿತ್ತ

Author : ವಿ. ಇಂದಿರಾ

Pages 66




Published by: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಬೆಂಗಳೂರು
Phone: 9740811455

Synopsys

ಮನುಷ್ಯ ಮೊದಲಿನಿಂದಲೂ ಸಂಘಜೀವಿ. ಒಂಟಿಯಾಗಿ ಆತ ಬದುಕಲಾರ. ಜೊತೆಗೆ ಅಣ್ಣ, ತಮ್ಮ, ಅಕ್ಕ, ತಂಗಿ, ಅಪ್ಪ, ಅಮ್ಮ, ಮಾವ, ಚಿಕ್ಕಪ್ಪ, ಹೆಂಡತಿ, ಮಕ್ಕಳು ಹೀಗೆ ಯಾರಾದರೂ ಇರಲೇಬೇಕು. ಸಂಬಂಧಗಳು ನೆಂಟರಿಷ್ಟರಿಗೆ ಮಾತ್ರ ಸೀಮಿತವಲ್ಲ. ಕೆಲಸ ಮಾಡುವ ಸ್ಥಳ, ಶಾಲೆ ಕಾಲೇಜು ಇಂತಹ ಸಾರ್ವಜನಿಕ ಸಂದರ್ಭದಲ್ಲಿಯೂ ಸಂಬಂಧಗಳಿಗೆ ಮಹತ್ವವಿದೆ. ತನಗಿಂತ ದೊಡ್ಡವರೊಡನೆ ಹೇಗೆ ವ್ಯವಹರಿಸಬೇಕು. ತನಗಿಂತಲೂ ಚಿಕ್ಕವರೊಡನೆ ವ್ಯವಹರಿಸುವ ರೀತಿ ಹೇಗಿರಬೇಕು? ಸ್ನೇಹಿತರೊಡಗಿನ ಒಡನಾಟ ಎಷ್ಟಿರಬೇಕು ಇತ್ಯಾದಿ ಇತ್ಯಾದಿಗಳು ಚಿಕ್ಕ ಸಂಗತಿಗಳಾದರೂ ನಿರ್ಲಕ್ಷಿಸುವಂತಿಲ್ಲ. ಇಂತಹ ಸಂಬಂಧಗಳ ವೃದ್ಧಿಗೆ ವ್ಯಕ್ತಿಯ ಸಂವಹನ ಕೂಡ ಮುಖ್ಯವಾಗುತ್ತದೆ. ಸಂವಹನ ಕೌಶಲ ಎನ್ನುವುದು ಜೀವನದಲ್ಲಿ ಆಗಾಗ ಬಳಸಲೇಬೇಕಾದ ಸಾಧನವಾಗಿದೆ. 

ಡಾ. ವಿ. ಇಂದಿರಮ್ಮ ಅವರು ಬರೆದಿರುವ ’ಸಂಬಂಧಗಳತ್ತ ಒಂದು ಚಿತ್ತ’ ಮನೋವೈಜ್ಞಾನಿಕವಾಗಿ ಮಹತ್ವದ್ದು. ಕನ್ನಡದಲ್ಲಿ ಮನೋಸ್ವಾಸ್ಥ್ಯಕ್ಕೆ, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಇಂತಹ ಪುಸ್ತಕಗಳನ್ನು ಕನ್ನಡದಲ್ಲಿ ಪ್ರಕಟಿಸುವ ಮೂಲಕ ನಿಮ್ಹಾನ್ಸ್‌ (ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ) ಉತ್ತಮ ಕೆಲಸ ಮಾಡಿದೆ. 

Reviews

ಸಂವಹನ ಕೌಶಲ್ಯ ಎಂಬುದು ಮಾನವ ಸಂಬಂಧಗಳನ್ನು ಗಟ್ಟಿಗೊಳಿಸುವ ಹಾಗೂ ಮೌಲ್ಯಾಧಾರಿತ ಬದುಕನ್ನು ರೂಪಿಸಲು ಮೊದಲ ಪಾತ್ರ ವಹಿಸುತ್ತದೆ. ಮನುಷ್ಯ ಸಂಘ ಜೀವಿ, ಒಂಟಿಯಾಗಿ ಬದುಕಲಾರ ಎಂಬ ಮಾತಿದೆ. ಈ ಮಾತು ಎಷ್ಟು ವಾಸ್ತವ ಎಂಬುದಕ್ಕೆ ನಮ್ಮ ಬದುಕೇ ಸಾಕ್ಷಿ. ಜೀವನದುದ್ದಕ್ಕೂ ಸಂವಹನ ಹೇಗಿರಬೇಕು? ಆ ಕಲೆಯನ್ನು ವೃದ್ಧಿಸಿಕೊಳ್ಳುವುದು ಹೇಗೆ ಅದರ ಫಲ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಒಟ್ಟು ಆಶಯ ಈ ಹೊತ್ತಿಗೆಯದ್ದು. ಜಗತ್ತಿನಲ್ಲಿ ಸ್ನೇಹ, ಪ್ರೀತಿ ಹಾಗೂ ಸಂಸಾರದ ಸಂಬಂಧಗಳು ಮುರಿಯಲು ಮೂಲ ಕಾರಣ ಸಂವಹನ. ಇವುಗಳನ್ನು ಕಾಪಾಡಿಕೊಳ್ಳಲು ಮೂಲ ಮಂತ್ರವೇ ಮಾತು. ಆರೋಗ್ಯಕರ ಸಂವಹನ ಸಂಬಂಧಗಳ ಬೇರು ಬಿಗಿಯಾಗುವಂತೆ ಪರಿವರ್ತಿಸುತ್ತದೆ. ಈ ಕಲೆ ಎಲ್ಲರಲ್ಲಿಯೂ ಇರುವುದಿಲ್ಲ. ಹಾಗಾಗಿಯೇ ಪರಸ್ಪರ ವಿರೋಧ, ದ್ವೇಷ ಮುಂತಾದವುಗಳ ಕಾರಣದಿಂದ ಭಾಂದವ್ಯ ಕಳೆದುಕೊಳ್ಳುವುದು. ಸಂಬಂಧ ಕಳೆದುಕೊಳ್ಳಬಾರದು, ಸಂವಹನದಿಂದ ಭಾಂದವ್ಯ ಬೆಳೆಯಬೇಕು ಎಂಬ ಒತ್ತಾಸೆಯಿಂದ ಇಂದಿರಮ್ಮ ಅವರು ಈ ಕೃತಿಯ ಮೂಲಕ ಪ್ರಯತ್ನಿಸಿದ್ದಾರೆ. 

ಕೃಪೆ: ಪ್ರಜಾವಾಣಿ

https://www.prajavani.net/artculture/book-review/pustaka-vimarse-647658.html

Related Books